ಕುಂದಾಪುರ: ಭಟ್ಕಳ- ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸರ್ಕಲ್ ಬಳಿ ಇಂದು ಮಧ್ಯಾಹ್ನ ಆಟೋರಿಕ್ಷಾ ನಿಲ್ದಾಣಕ್ಕೆ ಅತಿ ವೇಗವಾಗಿ ಟಿಪ್ಪರ್ ಲಾರಿ ನುಗ್ಗಿದ ಪರಿಣಾಮ ನಾಲ್ಕು ಆಟೋರಿಕ್ಷಾಗಳು ಜಖಂಗೊಂಡಿವೆ.
ಕುಂದಾಪುರ ಕಡೆಯಿಂದ ಬೈಂದೂರಿನತ್ತ ಸಾಗುತ್ತಿದ್ದ ಟಿಪ್ಪರ್, ಚಾಲಕನ ನಿಯಂತ್ರಣ ತಪ್ಪಿ ಮುಳ್ಳಿಕಟ್ಟೆ ರಿಕ್ಷಾ ಸ್ಟ್ಯಾಂಡ್ ನಲ್ಲಿ ನಿಲ್ಲಿಸಿದ್ದ ನಾಲ್ಕು ಆಟೋಗಳಿಗೆ ಡಿಕ್ಕಿ ಹೊಡೆದಿದೆ. ಟಿಪ್ಪರ್ ಗುದ್ದಿದ ರಭಸಕ್ಕೆ ರಿಕ್ಷಾಗಳು ಪಲ್ಟಿಯಾಗಿ ಬಿದ್ದಿದ್ದವು. ಆಟೋ ಚಾಲಕರು ಮಧ್ಯಾಹ್ನದ ಊಟಕ್ಕೆ ಹೋಗಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟಿಪ್ಪರ್ ಚಾಲಕನ ಅಜಾಗರೂಕತೆ, ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಗಂಗೊಳ್ಳಿ ಠಾಣಾಧಿಕಾರಿ ನಂಜು ನೈಕ್ ಹಾಗೂ ಸಿಬ್ಬಂದಿ ಧಾವಿಸಿ, ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Kshetra Samachara
30/11/2021 05:48 pm