ಸುರತ್ಕಲ್: ರಾಷ್ತ್ರೀಯ ಹೆದ್ದಾರಿ 66ರ ಸುರತ್ಕಲ್ ಸಮೀಪದ ತಡಂಬೈಲ್ ನ ಸುಪ್ರೀಂ ಮಾಲ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಹಿರಿಯ ವ್ಯಕ್ತಿಯೊಬ್ಬರಿಗೆ ಸುರತ್ಕಲ್ ಕಡೆಯಿಂದ ಮುಲ್ಕಿ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳೀಯ ನಿವಾಸಿ ಅಯ್ಯಪ್ಪ (62) ಗಾಯಗೊಂಡವರು. ಅವರ ಪುತ್ರ ಬಸವರಾಜ್ ಹಸೆಕುರಿ ನೀಡಿದ ದೂರಿನಂತೆ ಬೈಕ್ ಸವಾರ ಮೋಹನ್ ಎಂಬಾತನ ವಿರುದ್ಧ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
20/11/2021 08:39 pm