ಮುಲ್ಕಿ: ಮುಲ್ಕಿ ಸಮೀಪದ ಕುಬೆವೂರು ಜಾರಂದಾಯ ದೈವಸ್ಥಾನ ದ್ವಾರದ ಬಳಿ ಬೈಕ್ ಗೆ ಕಾರು ಡಿಕ್ಕಿಯಾಗಿ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿಮಂತೂರು ಬಳಿಯ ನಿವಾಸಿ ಶ್ರೀಮತಿ ಬೇಬಿ(56) ಗಾಯಾಳು.
ಮಹಿಳೆ ಬೈಕ್ ನಲ್ಲಿ ಹಿಂಬದಿ ಸವಾರರಾಗಿ ಶಿಮಂತೂರು ನಿಂದ ಮುಲ್ಕಿ ಕಡೆಗೆ ತೆರಳುತ್ತಿದ್ದು, ಕುಬೆವೂರು ಜಾರಂದಾಯ ದೈವಸ್ಥಾನದ ದ್ವಾರದ ಬಳಿ ಒಳ ಬದಿಯಿಂದ ಏಕಾಏಕಿ ಕಾರು ಶಿಮಂತೂರು ಮುಲ್ಕಿ ಮುಖ್ಯರಸ್ತೆಗೆ ತಿರುವು ಪಡೆಯಲು ಯತ್ನಿಸಿದಾಗ ಬೈಕಿಗೆ ಡಿಕ್ಕಿ ಹೊಡೆದಿದೆ.
ಬೈಕ್ ಸವಾರ ಸತೀಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಹ ಸವಾರರಾದ ಮಹಿಳೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಚಾಲಕನ ವಿರುದ್ಧ ಸುರತ್ಕಲ್ ಟ್ರಾಫಿಕ್ ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಕಿಲ್ಪಾಡಿ ಕುಬೆವೂರು ಜಾರಂದಾಯ ದೈವಸ್ಥಾನದ ದ್ವಾರದ ಬಳಿ ಅಪಾಯಕಾರಿ ತಿರುವು ಇದ್ದು, ವಾಹನ ಸವಾರರು ಅತಿವೇಗದಿಂದ ಚಲಿಸಿ ಪರಿಸರದಲ್ಲಿ ಅನೇಕ ಅಪಘಾತಗಳು ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
Kshetra Samachara
12/11/2021 10:57 pm