ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡೇಶ್ವಾಲ್ಯ: ತೆಂಗಿನ ಮರ ಕಡಿದ ವ್ಯಕ್ತಿ ಪಕ್ಕದಲ್ಲಿದ್ದ ಇನ್ನೊಂದು ತೆಂಗಿನ ಮರಕ್ಕೆ ಬಲಿ!

ಬಂಟ್ವಾಳ: ತೆಂಗಿನ ಮರ ಕಡಿಯುವ ವೇಳೆ ಮರವೇ ಮೈಮೇಲೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಿಲಿಂಗಾಲ ನಿವಾಸಿ ಸುರೇಶ್(38) ಮೃತಪಟ್ಟವರು.

ಕಳೆದ ಭಾನುವಾರ ಸುರೇಶ್ ಮನೆ ಸಮೀಪದ ಸಂಪೋಳಿ ಎಂಬಲ್ಲಿರುವ ಕೃಷಿಕ ಭುಜಂಗ ಶೆಟ್ಟಿ ಅವರ ಮನೆಗೆ ತೆಂಗಿನ ಮರ ಕಡಿಯಲು ತೆರಳಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ತೆಂಗಿನ ಮರ ಕಡಿದಿದ್ದರು. ಕಡಿದ ತೆಂಗಿನ ಮರ ನೆಲಕ್ಕೆ ಬಿದ್ದ ರಭಸಕ್ಕೆ ನೆಲ ಅದುರಿದ ಹಿನ್ನೆಲೆಯಲ್ಲಿ ಪಕ್ಕದಲ್ಲೇ ಸತ್ತು ಒಣಗಿದ್ದ ತೆಂಗಿನ ಮರ ಆಕಸ್ಮಿಕವಾಗಿ ಸುರೇಶ್ ಅವರ ಮೈ ಮೇಲೆಯೇ ಬಿದ್ದಿದೆ!

ಒಣಗಿದ್ದ ತೆಂಗಿನ ಮರ ತನ್ನ ಮೇಲೆ ಬೀಳುವುದನ್ನು ಕೂಡಲೇ ಅರಿತ ಸುರೇಶ್, ಸ್ಥಳದಿಂದ ಓಡಿ ಬಚಾವ್ ಆಗಲು ಪ್ರಯತ್ನಿಸಿದರೂ, ದುರಾದೃಷ್ಟವಶಾತ್ ಮರ ಅವರ ಮೇಲೆಯೇ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯರು ತುಂಬೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಸುರೇಶ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಇಬ್ಬರು ಕೂಡ ಹೈಸ್ಕೂಲ್ ಶಿಕ್ಷಣ ಮಾಡುತ್ತಿದ್ದಾರೆ. ಸುರೇಶ್ ಸ್ಥಳೀಯವಾಗಿ ಜನಸ್ನೇಹಿ ಕೆಲಸಗಾರನಾಗಿ ಉತ್ತಮ ಹೆಸರು ಸಂಪಾದಿಸಿದ್ದರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

10/11/2021 05:41 pm

Cinque Terre

7.69 K

Cinque Terre

0