ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೊಲ್ನಾಡು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಕ್ರಾಸ್ ಬಳಿ ಸೋಮವಾರ ರಾತ್ರಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರಿನಿಂದ ಉಡುಪಿ ಕಡೆಯ ರಾಷ್ಟ್ರೀಯ ಹೆದ್ದಾರಿ ಕೊಲ್ನಾಡು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಬಳಿ ಲಾರಿಯೊಂದು ನಿಂತಿದ್ದು ಅದೇ ದಿಕ್ಕಿನಿಂದ ಹೋಗುತ್ತಿದ್ದ ಬೈಕ್ ಸವಾರ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ಲಾರಿಯ ಹಿಂಭಾಗದ ಒಳಗಡೆಯೇ ಬೈಕ್ ನುಸುಳಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳು ಸವಾರ ಕಾಪು ಬಳಿಯ ಬೆಳಪು ನಿವಾಸಿ ಮೊಯ್ದೀನ್ ಸಿನಾನ್ (22) ಎಂದು ಗುರುತಿಸಲಾಗಿದ್ದು, ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಂಗಳಮುಖಿಯರ ಉಪಟಳ: ಕೊಲ್ನಾಡು ಹೆದ್ದಾರಿ ಪರಿಸರದಲ್ಲಿ ರಾತ್ರಿಯಾಗುತ್ತಲೇ ಮಂಗಳಮುಖಿಯರ ಕಾಟ ವಿಪರೀತವಾಗುತ್ತಿದ್ದು, ಹೆದ್ದಾರಿಯಲ್ಲಿ ಲಾರಿ ತಡೆದು ನಿಲ್ಲಿಸಿ, ಚಾಲಕರನ್ನು ಕಾಮದಾಟಕ್ಕೆ ಕರೆಯುತ್ತಿದ್ದು, ಈ ಕಾರಣದಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ದಿನೇಶ್ ಕೊಲ್ನಾಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
02/11/2021 08:02 am