ಮಂಗಳೂರು; ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಕಳಿಯ ಗ್ರಾಮದ ಪರಪ್ಪು ಸುಣ್ಣಲಡ್ಡ ಮನೆ ನಿವಾಸಿ ಮುತ್ತಪ್ಪ ಶೆಟ್ಟಿ ಎಂಬುವವರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಿಗ್ಗೆ ಮುತ್ತಪ್ಪ ಶೆಟ್ಟಿ ಯವರು ಔಷಧಿ ತರಲೆಂದು ಬೆಳಗ್ಗೆ ಗೇರುಕಟ್ಟೆಯಿಂದ ಬಸ್ಸಿನಲ್ಲಿ ಉಪ್ಪಿನಂಗಡಿ ಕಡೆಗೆ ಪ್ರಯಾಣಿಸಿದ್ದರು. ಬಸ್ಸಿನಿಂದ ಇಳಿದವರೇ ಉಪ್ಪಿನಂಗಡಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
18/10/2021 04:22 pm