ಕಟಪಾಡಿ: ಉಡುಪಿ ಸಮೀಪದ ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡುರಾತ್ರಿ ಪಾದಚಾರಿಯೊಬ್ಬರಿಗೆ ವಾಹನವೊಂದು ಡಿಕ್ಕಿ ಹೊಡೆದು ದೇಹವು ಛಿದ್ರ ಛಿದ್ರವಾಗಿತ್ತು! ದುರದೃಷ್ಟವಶಾತ್ ಈ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು ಗಂಟೆಗಳ ಕಾಲ ಆಂಬುಲೆನ್ಸ್ ಗಾಗಿ ಪರದಾಡಿದ ಪ್ರಸಂಗ ತಡರಾತ್ರಿ ನಡೆದಿದೆ.ಯಾವುದೇ ಆಂಬುಲೆನ್ಸ್ ಸಿಗದಿದ್ದಾಗ ವಿಶು ಶೆಟ್ಟಿಯವರು ಲೈಫ್ ಕೇರ್ ಆಂಬುಲೆನ್ಸ್ ಮುಖಾಂತರ ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಉಡುಪಿ ಜಿಲ್ಲೆಯ ಪ್ರಮುಖ ಭಾಗದಲ್ಲಿ ಆಂಬುಲೆನ್ಸ್ ಗಾಗಿ ಇಂತಹ ದುಃಸ್ಥಿತಿ ಬಂದಿರುವುದು ಶೋಚನೀಯ ಸಂಗತಿ. ಇಂತಹ ಸಂದರ್ಭದಲ್ಲಿ ತುರ್ತು ಸೇವೆಗಾಗಿ ಸರಕಾರಿ ಆಂಬುಲೆನ್ಸ್ ನ ಅಗತ್ಯವಿದೆ. ಜಿಲ್ಲೆಯ ಹೃದಯ ಭಾಗದಲ್ಲಿ ಇಂತಹ ದುಃಸ್ಥಿತಿ ಎದುರಿಸಬೇಕಾದ ಪರಿಸ್ಥಿತಿ ಇದ್ದರೆ ಇನ್ನು ಗ್ರಾಮಾಂತರ ಪ್ರದೇಶದಲ್ಲಿ ಇಂತಹ ದುರ್ಘಟನೆ ನಡೆದಾಗ ಪರಿಸ್ಥಿತಿ ಏನಾಗಬಹುದು?ತಕ್ಷಣ ಜಿಲ್ಲಾಡಳಿತ ಇಂತಹ ಸಂದರ್ಭಗಳಿಗಾಗಿ ಒಂದು ತುರ್ತು ಆಂಬುಲೆನ್ಸನ್ನು ಕಾದಿರಿಸಿಸಬೇಕು ಎಂದು ವಿಶು ಶೆಟ್ಟಿಯವರು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.
Kshetra Samachara
28/09/2021 03:44 pm