ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ದೂರವಾಣಿ ಕಛೇರಿ ಬಳಿ ಆಕಸ್ಮಿಕ ಬೆಂಕಿ ತಪ್ಪಿದ ಭಾರೀ ಅನಾಹುತ.

ಮುಲ್ಕಿ: ಇಲ್ಲಿಗೆ ಸಮೀಪದ ಕಾರ್ನಾಡು ದೂರವಾಣಿ ಕಚೇರಿ ಬಳಿ ಭಾನುವಾರ ಸಂಜೆ ದುಷ್ಕರ್ಮಿಗಳು ಹುಲ್ಲಿಗೆ ಬೆಂಕಿ ಕೊಟ್ಟಿದ್ದು ಬೆಂಕಿಯ ಕೆನ್ನಾಲಿಗೆ ಹರಡುತ್ತಿದ್ದಂತೆ ಮೆಸ್ಕಾಂ ಸಿಬ್ಬಂದಿಗಳು ಮತ್ತು ದೂರವಾಣಿ ಇಲಾಖೆಯ ನೌಕರರು ಬೆಂಕಿಯನ್ನು ನಂದಿಸಿದ್ದಾರೆ.

ಭಾನುವಾರ ಸಂಜೆ ವೇಳೆ ಕಾರ್ನಾಡು ಬಿಎಸ್ಸೆನ್ನೆಲ್ ದೂರವಾಣಿ ಕಚೇರಿಯ ಬಳಿಯ ಟ್ರಾನ್ಸ್ಫಾರ್ಮರ್ ಕೆಳಗಡೆ ಆಕಸ್ಮಿಕ ಬೆಂಕಿ ಹರಡಿದ್ದು ಕೆನ್ನಾಲಗೆ ಹಬ್ಬಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ದೂರವಾಣಿ ನೌಕರ ಕೀರ್ತೆಶ ಮತ್ತು ಮುಲ್ಕಿ ಮೆಸ್ಕಾಂ ಸಿಬ್ಬಂದಿ ಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಬೆಂಕಿಯು ಟ್ರಾನ್ಸ್ಫಾರ್ಮರ್ ಕೆಳಗಡೆ ಕೆನ್ನಾಲಗೆ ಯಂತೆ ಹಬ್ಬಿದ್ದು ಕೂಡಲೇ ನಂದಿಸಿದ ಕಾರಣ ಭಾರೀ ಅನಾಹುತ ತಪ್ಪಿದೆ. ಭಾನುವಾರವಾದ ಜನಸಂಖ್ಯೆ ವಿರಳವಾಗಿರುವ ಕಾರಣ ಬೆಂಕಿ ಹಬ್ಬಿರುವ ಘಟನೆ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ಆಕಸ್ಮಿಕ ಬೆಂಕಿಯಿಂದ ಮುಲ್ಕಿ ನಗರ ಪಂಚಾಯಿತಿ ಕುಡಿಯುವ ನೀರಿನ ಪೈಪ್ ಗಳಿಗೆ ಹಾನಿಯಾಗಿದೆ ಎಂದು ಮುಲ್ಕಿ ನಗರ ಪಂಚಾಯತ್ ಸಿಬ್ಬಂದಿ ಕಿಶೋರ್ ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

21/02/2021 08:49 pm

Cinque Terre

13.45 K

Cinque Terre

0