ಉಡುಪಿ: ಇದೇ ತಿಂಗಳು 13ರ ರವಿವಾರ ಮಲ್ಪೆ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 28 ಮೀನುಗಾರರ ಪೈಕಿ ಸುಧೀರ್ ಮುಲ್ಕಿ(30) ಎಂಬವರ ಮೃತದೇಹ ನಿನ್ನೆ ಬುಧವಾರದಂದು ಮಲ್ಪೆ ಬಂದರಿನಲ್ಲಿ ಟಿ ಧಕ್ಕೆಯ ಹೊಳೆಯಲ್ಲಿ ಪತ್ತೆಯಾಗಿದೆ.
ಉಡುಪಿಯ ಕೊಡವೂರು ಗ್ರಾಮದ ನಿವಾಸಿ ಮಹಮ್ಮದ್ ಅಲಿ(42) ಇವರು ಮಲ್ಪೆಯಲ್ಲಿ ಜಯಲಕ್ಷ್ಮೀ ಬೋಟಿನ ಪಾಲುದಾರಿಕೆ ನಡೆಸಿಕೊಂಡಿದ್ದಾರೆ. ಡಿ.13ರ ರವಿವಾರದಂದು ಅಶೋಕ ಸುವರ್ಣ ತಂಡೇಲರಾಗಿ ಹಾಗೂ ಗಣೇಶ, ಸುಧೀರ್, ನಾರಾಯಣ ಹಾಗೂ ಇತರರೊಂದಿಗೆ 28 ಜನ ಮೀನುಗಾರರು ಮೀನುಗಾರಿಕೆಗೆ ತೆರಳಿ ಡಿ.14ರ ಸೋಮವಾರದಂದು ಮಲ್ಪೆ ಬಂದರಿನ ಧಕ್ಕೆ ಬಂದು ಮೀನು ಖಾಲಿ ಮಾಡಿ ಬೋಟ್ ಅನ್ನು ಲಂಗರು ಹಾಕಿ ಕಟ್ಟಿದ್ದರು.
ಈ ನಡುವೆ ಡಿ.16ರ ಬುಧವಾರದಂದು ಮಧ್ಯಾಹ್ನ 1 ಗಂಟೆಗೆ ಮಹಮ್ಮದ್ ಅಲಿ ಅವರಿಗೆ ಪವನ್ ಮುಲ್ಕಿ ಅವರು ಕರೆ ಮಾಡಿ ಸುಧೀರ್ ಮುಲ್ಕಿ ಅವರ ಮೃತ ದೇಹ ಮಲ್ಪೆ ಬಂದರಿನ ಟಿ ಧಕ್ಕೆಯ ಹೊಳೆಯಲ್ಲಿ ತೇಲುತ್ತಿರುವುದಾಗಿ ತಿಳಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/12/2020 05:29 pm