ಮಂಗಳೂರು: ಉಳ್ಳಾಲ ಬೈಲಿನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ನೀರಿನ ಟ್ಯಾಂಕರ್‌ನ ಅಡಿಗೆ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಐದು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ.
ಮೂಲತಃ ಉತ್ತರ ಪ್ರದೇಶ ಮೂಲದ, ಉಳ್ಳಾಲಬೈಲು ಬಾಕಿಮಾರ್‌ನಲ್ಲಿ ಬಾಡಿಗೆ ನಿವಾಸದಲ್ಲಿರುವ ಶರವಣ್ ಕುಮಾರ್ ಮತ್ತು ಪಿಂಕಿ ದಂಪತಿ ಪುತ್ರ ಕೃಷ್ಣ ಮೃತಪಟ್ಟ ಬಾಲಕ ಬಾಲಕ.
ಸೋಮವಾರ ಸಂಜೆ ತಾಯಿ ಮತ್ತು ಸಹೋದರ, ಸಹೋದರಿಯರೊಂದಿಗೆ ರಸ್ತೆ ದಾಟುತ್ತಿದ್ದ ವೇಳೆ ಟ್ಯಾಂಕರ್ ಹರಿದ ಪರಿಣಾಮ ಬಾಲಕ ಕೃಷ್ಣ ಗಂಭೀರ ಗಾಯಗೊಂಡಿದ್ದ. ತಕ್ಷನ ಆತನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತಸೆ ಫಲಕಾರಿಯಾಗದೇ ಬಾಲಕ ಇಂದು ಆಸ್ಪತೆರೆಯಲ್ಲಿ ಮೂತಪಟ್ಟಿದೆ ಎಮದು ತಿಳಿದು ಬಮದಿದೆ.
ತಾಯಿ ಮಕ್ಕಳ ಕುಟುಂಬವು ಉಳ್ಳಾಲ ಬೀಚ್ ಗೆ ವಿಹಾರಕ್ಕೆಂದು ತೆರಳಿ ಹಿಂದಿರುಗುವಾಗ ದುರ್ಘಟನೆ ನಡೆದಿತ್ತು. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
Kshetra Samachara
03/12/2020 10:40 pm