ಕಾರ್ಕಳ: ರಸಗೊಬ್ಬರ ಸಾಗಾಟದ ಲಾರಿಯೊಂದು ತೆರೆದ ಬಾವಿಗೆ ಬಿದ್ದ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಪಿಎಂಸಿಗೆ ಬಂದ ಲಾರಿ ಗೋಡೌನ್ ಸಮೀಪ ರಿವರ್ಸ್ ತೆಗೆಯುವ ವೇಳೆ ನಿಯಂತ್ರಣ ತಪ್ಪಿ 30 ಅಡಿ ಆಳದ ತೆರೆದ ಬಾವಿಗೆ ಬಿದ್ದಿದೆ.
ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಬಾವಿಗೆ ಬಿದ್ದ ಪರಿಣಾಮ 1ಲಕ್ಷದ 36 ಸಾವಿರ ರೂ. ಮೌಲ್ಯದ 20 ಟನ್ ರಸಗೊಬ್ಬರ ನೀರುಪಾಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/11/2020 11:46 am