ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ: ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಉಪ್ಪಿನಂಗಡಿ: ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಪುಳಿತ್ತಡಿಯ ಸಮೀಪ ಮಂಗಳವಾರ ರಾತ್ರಿ ನಡೆದಿದೆ.

ಬಜತ್ತೂರು ಗ್ರಾಮದ ಪಂರ್ದಾಜೆಯ ನಾಗೋಜಿ ನಿವಾಸಿ ಚೆನ್ನಪ್ಪ ಗೌಡರ ಪುತ್ರ ನಾರಾಯಣ ಗೌಡ (40) ಮೃತ ಬೈಕ್ ಸವಾರ.

ಕೃಷಿಕರಾಗಿರುವ ನಾರಾಯಣ ಗೌಡರು ಉಪ್ಪಿನಂಗಡಿಗೆ ಬಂದಿದ್ದು, ಮಂಗಳವಾರ ರಾತ್ರಿ ಸುಮಾರು ಏಳೂವರೆ ಸುಮಾರಿಗೆ ಉಪ್ಪಿನಂಗಡಿಯ ಕಡೆಯಿಂದ ಮನೆಗೆ ಹಿಂದಿರುಗುವ ಮಧ್ಯೆ ಪುಳಿತ್ತಡಿ ಬಳಿಯ ಪದಾಳ ದೇವಾಲಯ ಸಮೀಪ ಇವರ ಬೈಕ್ ಗೆ ಪೆರಿಯಡ್ಕ ಕಡೆಯಿಂದ ಹಳೆಗೇಟು ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಕೃಷಿಕರಾಗಿದ್ದು, ಸುಮಾರು ಒಂದೂವರೆ ವರ್ಷದ ಗಂಡು ಮಗು, ಪತ್ನಿ, ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

ಟಿಪ್ಪರ್ ಚಾಲಕನ ಅತೀ ವೇಗದ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದ್ದು, ಸ್ಥಳಕ್ಕೆ ಬಂದು ಉಪ್ಪಿನಂಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ, ಸಕ್ರಮ ಮರಳು, ಜಲ್ಲಿ, ಕೆಂಪುಕಲ್ಲು ಸಾಗಾಟಕ್ಕೆ ರಸ್ತೆ ಕಾಮಗಾರಿಯ ಕೆಲಸಕ್ಕೆ ಟಿಪ್ಪರ್ ಲಾರಿಗಳನ್ನು ಅತೀ ಹೆಚ್ಚು ಬಳಸುತ್ತಿದ್ದು, ಈ ಚಾಲಕರಿಗೆ ಟ್ರಿಪ್ ನ ಆಧಾರದಲ್ಲಿ ಸಂಬಳ ನಿಗದಿಯಾಗಿರುತ್ತದೆ. ಆದ್ದರಿಂದ ಈ ಟಿಪ್ಪರ್ ಲಾರಿಗಳು ನಿಗದಿತ ಸಮಯದಲ್ಲಿ ಹೋಗಬೇಕಾದ ಸ್ಥಳವನ್ನು ತಲುಪಲು ಅತೀ ವೇಗದಲ್ಲಿ ಸಾಗುತ್ತಿದ್ದು, ಜನರ ಸಾವು- ನೋವಿಗೆ ಕಾರಣವಾಗುತ್ತಿವೆ. ಆದ್ದರಿಂದ ಅವುಗಳ ವೇಗಕ್ಕೆ ಕಡಿವಾಣ ಹಾಕಬೇಕು ಎಂಬ ಆಗ್ರಹ ಸಾರ್ವಜನಿಕರದ್ದು.

Edited By : Nagaraj Tulugeri
Kshetra Samachara

Kshetra Samachara

03/11/2020 11:01 pm

Cinque Terre

25.3 K

Cinque Terre

3

ಸಂಬಂಧಿತ ಸುದ್ದಿ