ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರಿನಲ್ಲಿ ಪೊಲೀಸ್ ಜೀಪ್ ಪಲ್ಟಿ: ಇಬ್ಬರಿಗೆ ಗಾಯ; ಓಮ್ನಿಯನ್ನು ಬೆನ್ನಟ್ಟಿದಾಗ ಅಪಘಾತ

ಬೈಂದೂರು: ಬೈಂದೂರಿನಲ್ಲಿ ವೃತ್ತ ನಿರೀಕ್ಷಕರ ಜೀಪು ಪಲ್ಟಿಯಾದ ಘಟನೆ ನಡೆದಿದ್ದು , ವೃತ್ತನಿರೀಕ್ಷಕರು ಮತ್ತವರ ಚಾಲಕನಿಗೆ ಗಾಯವಾಗಿವೆ‌. ನಿನ್ನೆ ರಾತ್ರಿ ಓಮ್ನಿ ಕಾರೊಂದನ್ನು ಬೆನ್ನಟ್ಟಿ ಹೋಗುವಾಗ ಈ ಘಟನೆ ನಡೆದಿದೆ.

ಒತ್ತಿನೆಣೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಒಂದು ಗಂಟೆ ಸುಮಾರಿಗೆ ನೈಟ್ ಬೀಟ್‌ನಲ್ಲಿರುವಾಗ ಓಮ್ನಿ ಕಾರೊಂದು ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ಅವರ ಜೀಪನ್ನು ಕಂಡು ವೇಗವಾಗಿ ಹೋಗುತ್ತಿದ್ದನ್ನು ಗಮನಿಸಿ, ಬೆನ್ನಟ್ಟಿದಾಗ ಪೊಲೀಸ್ ಜೀಪು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಜೀಪು ಪಲ್ಟಿಯಾದ ಪರಿಣಾಮ ವೃತ್ತ ನಿರೀಕ್ಷಕ ಸುರೇಶ ನಾಯ್ಕ್ ಮತ್ತು ಚಾಲಕ ಹೇಮರಾಜ್ ಗಾಯಗೊಂಡಿದ್ದು, ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Edited By : Nagesh Gaonkar
Kshetra Samachara

Kshetra Samachara

16/10/2020 11:38 am

Cinque Terre

28.45 K

Cinque Terre

3

ಸಂಬಂಧಿತ ಸುದ್ದಿ