ಮಲ್ಪೆ: ಎರಡು ದಿನಗಳ ಹಿಂದೆ ಮಲ್ಪೆ ಸಮೀಪದ ತೊಟ್ಟಂನಲ್ಲಿ ಬೂತಾಯಿ ಮೀನುಗಳ ರಾಶಿಯೇ ಕಡಲ ತೀರಕ್ಕೆ ಬಂದು ಬಿದ್ದಿತ್ತು.ಇದರ ಬೆನ್ನಲ್ಲೇ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಾಡದೋಣಿಯ ಬಲೆಗೆ ಕೆಬಿತಾಟೆ (ಮಿಲ್ಕ್ ತಾಟೆ) ಮೀನುಗಳು ಭಾರೀ ಪ್ರಮಾಣದಲ್ಲಿ ಬಿದ್ದಿವೆ.
ಎರಡರಿಂದ ಮೂರು ಕೆಜಿ ತೂಗುವ ಸುಮಾರು 100 ತಾಟೆ ಮೀನುಗಳನ್ನು ದಕ್ಕೆಯ ಹರಾಜು ಪ್ರಾಂಗಣದಲ್ಲಿ ಇಡಲಾಗಿತ್ತು.ಬಳಿಕ ಈ ಮೀನು ಕೆ.ಜಿ.ಗೆ 280ರೂ. ನಂತೆ ಹರಾಜಿನಲ್ಲಿ ವ್ಯಾಪಾರಿಗಳಿಗೆ ಮಾರಾಟವಾಗಿದೆ. ಈ ಮೀನು ಕೇರಳಕ್ಕೆ ಹೆಚ್ಚಾಗಿ ರವಾನೆಯಾಗುತ್ತದೆ. ಇದರ ಕಿವಿ ಮತ್ತು ರೆಕ್ಕೆಗಳಿಗೆ ಭಾರಿ ಬೇಡಿಕೆ ಇದೆ.
Kshetra Samachara
22/09/2022 04:59 pm