ಉಡುಪಿ: ನಾಳೆ ಕರ್ನಾಟಕ ಬಂದ್ ಗೆ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದು ಅದಕ್ಕೆಉಡುಪಿಯಿಂದಲೂ ಬೆಂಬಲ ವ್ಯಕ್ತವಾಗಿದೆ.
ಒಂದು ದಿನದ ಬಂದ್ ಗೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೆಂಬಲ ಸೂಚಿಸಿದೆ.
ಬಂದ್ ಮಾಡಿ ಹಿಜಾಬ್ ವಿಚಾರದಲ್ಲಿ ನಿರಾಶೆ ಮತ್ತು ಅಸಮ್ಮತಿ ಪ್ರಕಟಿಸಲು ಗುರುವಾರ ವ್ಯಾಪಾರ ವಹಿವಾಟು ನಡೆಸದಿರಲು ತೀರ್ಮಾನ ಕೈಗೊಳ್ಳಲಾಗಿದೆ.ಶಾಂತಿಯುತ ವ್ಯವಹಾರ ಬಂದ್ ಮಾಡಲು ಮುಸ್ಲಿಂ ಒಕ್ಕೂಟ ಕರೆ ನೀಡಿದ್ದು, ಒತ್ತಾಯಪೂರ್ವಕ ಬಂದ್ ಮಾಡಿಸಬೇಡಿ.ಯಾವುದೇ ರಾಲಿ, ಪ್ರತಿಭಟನಾ ಮೆರವಣಿಗೆ ಮಾಡಬೇಡಿ ಎಂದು ಮನವಿ ಮಾಡಿದೆ.
Kshetra Samachara
16/03/2022 09:50 pm