ಕಾಪು: ವಾಹನ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಪಡುಬಿದ್ರಿ ಪೊಲೀಸರು ದಂಡ ವಿಧಿಸಿ ಶನಿವಾರ ಬಿಸಿ ಮುಟ್ಟಿಸಿದರು.
ಉಚ್ಚಿಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿಢೀರ್ ಕಾರ್ಯಾಚರಣೆಗಿಳಿದ ಪಡುಬಿದ್ರಿ ಠಾಣಾಧಿಕಾರಿ ದಿಲೀಪ್ ನೇತೃತ್ವದ ಪೊಲೀಸರು, ಹೆಲ್ಮೆಟ್ ಹಾಕದಿರುವ, ಡಿಎಲ್ ಮತ್ತಿತರ ಅಗತ್ಯ ದಾಖಲೆಗಳಿಲ್ಲದ, ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚಾರ, ಓವರ್ ಲೋಡ್ ಸೇರಿದಂತೆ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿ ಚಾಲಕರಿಗೆ ಎಚ್ಚರಿಕೆ ನೀಡಿದರು.
Kshetra Samachara
13/02/2021 02:42 pm