ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶಾಸಕ ರಘುಪತಿ ಭಟ್ ರಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ: ಪರಿಹಾರದ ಚೆಕ್ ವಿತರಣೆ

ಬ್ರಹ್ಮಾವರ: ಉಡುಪಿ ತಾಲೂಕಿನ ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಯಾಡಿ ಪೀಟರ್ ಡಿಸೋಜ ಎಂಬುವರ ಮನೆ ಇತ್ತೀಚೆಗೆ ಬಂದ ಭಾರಿ ಮಳೆ ಮತ್ತು ನೆರೆಗೆ ಹಾನಿಯಾಗಿದ್ದು,ಇಂದು ಶಾಸಕ ರಘುಪತಿ ಭಟ್ ಅವರ ಮನೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.

ಮನೆ ಹಾನಿ ಪರಿಶೀಲನೆ ನಡೆಸಿದ ಶಾಸಕರು ಗರಿಷ್ಠ ಮೊತ್ತದ ಪರಿಹಾರವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಳಿಕ

ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 9 ಕುಟುಂಬಗಳಿಗೆ ಒಟ್ಟು ರೂ. 2,80,610/- ಮೊತ್ತದ ಚೆಕ್ ವಿತರಿಸಿದರು.ಈ ವೇಳೆ ಸ್ಥಳೀಯ ತಹಶೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

30/09/2020 01:23 pm

Cinque Terre

7.82 K

Cinque Terre

0

ಸಂಬಂಧಿತ ಸುದ್ದಿ