ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕರ್ಕಶ ಹಾರ್ನ್ ಅಳವಡಿಸಿದ ಬಸ್ ಚಾಲಕ,ಮಾಲಕರಿಗೆ ಚಾಟಿ: ದಂಡಪ್ರಯೋಗ!

ಕರ್ಕಶ ಹಾರ್ನ್ ವಿರುದ್ದ ಕಾರ್ಯಾಚರಣೆಗಿಳಿದ ಉಡುಪಿ ಟ್ರಾಫಿಕ್ ಪೋಲಿಸರು ಬಸ್ ನಲ್ಲಿ ಅಳವಡಿಸಲಾಗಿದ್ದ ಕರ್ಕಶ ಹಾರ್ನ್ ಗಳನ್ನು ವಶಕ್ಕೆ ಪಡೆದಿದ್ದಾರೆ‌. ಉಡುಪಿ ಟ್ರಾಫಿಕ್ ಪೋಲಿಸರು ಉಡುಪಿ ನಗರ ಭಾಗದಲ್ಲಿ ಕರ್ಕಶ ಹಾರ್ನ್ ಬಳಸಿ ಶಬ್ದಮಾಲಿನ್ಯ ಉಂಟು ಮಾಡುತಿದ್ದ ಬಸ್ ಗಳ ವಿರುದ್ದ ಕಾರ್ಯಾಚರಣೆ ನಡೆಸಿದ್ದಾರೆ.ಉಡುಪಿ ಟ್ರಾಪಿಕ್ ಎಸ್ ಐ ಅಬ್ದುಲ್ ಖಾದರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.

ನಗರದ ತಾಲೂಕು ಆಫಿಸ್ ಬಳಿ ಕಾರ್ಯಾಚರಣೆಗಿಳಿದ ಪೋಲಿಸರು ಮಂಗಳೂರು- ಉಡುಪಿ ನಡುವೆ ಸಂಚರಿಸುವ ಎಕ್ಸ್ ಪ್ರೆಸ್, ಸರ್ವಿಸ್ ಬಸ್ ಗಳನ್ನು ತಪಾಸಣೆ ನಡೆಸಿ ಚಾಲಕ, ನಿರ್ವಾಹಕರ ಕೈಯಿಂದಲೇ ಹಾರ್ನ್ ಗಳನ್ನು ಕಿತ್ತೆಸೆಯುವಂತೆ ಮಾಡಿದರು. ಹಾರ್ನ್ ತೆಗೆಸಿದ್ದಷ್ಟೇ ಅಲ್ಲದೆ, "ದಂಡ" ಪ್ರಯೋಗವನ್ನೂ ಮಾಡಲಾಯಿತು!

Edited By :
Kshetra Samachara

Kshetra Samachara

15/03/2022 04:53 pm

Cinque Terre

3.95 K

Cinque Terre

0

ಸಂಬಂಧಿತ ಸುದ್ದಿ