ಉಡುಪಿ: ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಕ್ಯಾಸಲ್ ರಾಕ್ ವಾಸ್ಕೋ ಡ ಗಾಮದ ನಡುವೆ ಕುಲೆಮ್ ಮೊದಲ ಹಂತದಲ್ಲಿ ರೈಲ್ವೆ ಹಳಿ ದ್ವಿಪಥ ಕಾಮಗಾರಿ ನಿಟ್ಟಿನಲ್ಲಿ ಆರು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.
ಆ.20, 21: ಕುಲೆಮ್ ವಾಸ್ಕೋಡ ಗಾಮ(07341) ಪ್ಯಾಸೆಂಜರ್ ರೈಲು, ವಾಸ್ಕೊಡ ಗಾಮ ಕುಲೆಮ್ ಪ್ಯಾಸೆಂಜರ್ (07342), ಕುಲೆಮ್ ವಾಸ್ಕೋ ಡ ಗಾಮ ಡೆಮು (07379), ವಾಸ್ಕೋ ಡ ಗಾಮ ಕುಲೆಮ್ ಡೆಮು(07380), ಕುಲೆಮ್ ವಾಸ್ಕೊ ಡ ಗಾಮ ಪ್ಯಾಸೆಂಜರ್ (07344), ವಾಸ್ಕೋ ಡ ಗಾಮ ಕುಲೆಮ್ ಪ್ಯಾಸೆಂಜರ್ (07343).
ಹೆಚ್ಚುವರಿ ಬೋಗಿ ಅಳವಡಿಕೆ: ಹಾಪ ಮಡಗಾಂವ್ ವೀಕ್ಲಿ ಎಕ್ಸ್‌ಪ್ರೆಸ್ (22908) ಹಾಗೂ ಮಡಗಾಂವ್ ಹಾಪ ವೀಕ್ಲಿ ಎಕ್ಸ್‌ಪ್ರೆಸ್ (22907) ರೈಲಿಗೆ ಹೆಚ್ಚುವರಿಯಾಗಿ ಒಂದು ಸ್ತ್ರೀಪರ್ ಬೋಗಿ ಅಳವಡಿಸಲಾಗಿದೆ. ರೈಲಿನ ನಿಲುಗಡೆ ತಾಣ, ವೇಳಾಪಟ್ಟಿ ಮಾಹಿತಿಯನ್ನು www.enquiry. indianrail.gov.in ಅಥವಾ ಎನ್ ಟಿಇಎಸ್ ಆ್ಯಪ್ ಡೌನ್ ಲೋಡ್ ಮಾಡಿ ಪಡೆದುಕೊಳ್ಳಬಹುದು ಎಂದು ಕೊಂಕಣ ರೈಲ್ವೆ ತಿಳಿಸಿದೆ.
Kshetra Samachara
11/08/2022 03:02 pm