ಪಡುಬಿದ್ರಿ: ಹೆಜಮಾಡಿ, ಬಂದರು ಯೋಜನೆ ಜಾರಿಯಿಂದ ಕಾಪುವಿನಿಂದ ಸುರತ್ಕಲ್ ವರೆಗಿನ ಮೀನುಗಾರಿಕೆಗೆ ಅನುಕೂಲವಾಗಿದೆ. ಯೋಜನೆಗೆ ಸಿಎಂ ಯಡಿಯೂರಪ್ಪ ಜನವರಿ 19ರಂದು ಶಿಲಾನ್ಯಾಸ ನಡೆಸಲಿದ್ದಾರೆ.
ಈ ಭಾಗದಿಂದ ಸುಮಾರು 2ರಿಂದ 3 ಸಾವಿರ ಮೀನುಗಾರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಹೆಜಮಾಡಿಯ ಗುಂಡಿ ಮೊಗವೀರ ಸಭಾಗೃಹದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಬಂದರು ಯೋಜನೆಗಾಗಿ ಹಲವಾರು ವರ್ಷಗಳಿಂದ ಈ ಭಾಗದ ಜನ ಹೋರಾಟ ನಡೆಸಿದ್ದರು. ಮುಖಂಡರಾದ ಜಿ. ಶಂಕರ್ ಅವರ ಸತತ ಪರಿಶ್ರಮದ ಫಲವಾಗಿ ಯೋಜನೆ ಜಾರಿ ಹಂತದಲ್ಲಿದೆ ಎಂದು ಮೆಂಡನ್ ಹೇಳಿದರು.
Kshetra Samachara
18/01/2021 06:56 pm