ಉಡುಪಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಅಂದರೆ, ರಾಜ್ಯ ಮತ್ತು ದೇಶದಲ್ಲಿ ತನ್ನದೇ ಆದ ವೈಶಿಷ್ಟ್ಯ ಮತ್ತು ವಿಶೇಷತೆಯನ್ನು ಒಳಗೊಂಡಿದೆ.
ಪ್ರತಿನಿತ್ಯ ಸಾವಿರಾರು ಭಕ್ತರು ಬಂದು ಶ್ರೀ ದೇವರ ಕೃಪೆಗೆ ಪಾತ್ರರಾಗುತ್ತಾರೆ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವರು ತುಳುನಾಡಿನ ಆರಾಧ್ಯ ದೈವವಾಗಿದೆ.
ವರ್ಷದ ಜನವರಿಯಿಂದ ಫೆಬ್ರವರಿ ಸಂಕ್ರಾಂತಿ ತನಕ ಒಂದು ತಿಂಗಳು ಇಲ್ಲಿ ಅದ್ದೂರಿಯಾಗಿ ಜಾತ್ರೋತ್ಸವ ನಡೆಯುತ್ತದೆ.
ಇಂತಹ ಸನ್ನಿಧಾನದಲ್ಲಿ, 9 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಶೌಚಾಲಯ ಕಡೆ ಆಡಳಿತ ಮಂಡಳಿ ನಿರ್ಲಕ್ಷ ವಹಿಸುತ್ತಿದೆ.
ದೇವಸ್ಥಾನದ ಆಡಳಿತ ಮಂಡಳಿ 9 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಿತ್ತು ಇದು ಭಕ್ತರಿಗೆ ಅನುಕೂಲವಾಗಬೇಕಾದ ಶೌಚಾಲಯ ಇದೀಗ ಗಬ್ಬುನಾರುತ್ತಿದೆ.
ಸ್ವಚ್ಛತೆ ಬಗ್ಗೆ ಆಡಳಿತ ಮಂಡಳಿ ತಲೆಕೆಡಿಸಿಕೊಳ್ಳುತ್ತಿಲ್ಲ ಇದ್ದ ಒಬ್ಬ ಶೌಚಾಲಯದ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ನೌಕರನಿಗೆ ಪ್ರತಿದಿನ ನೂರು ರೂಪಾಯಿ ವೇತನವನ್ನು ಭರಿಸಲಾಗದ ಆಡಳಿತ ಮಂಡಳಿಗೆ ಸಾಧ್ಯವಾಗದೇ ಅವರನ್ನ ಕೆಲಸದಿಂದ ವಜಾ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿ 9 ಲಕ್ಷ ವೆಚ್ಚ ಖರ್ಚು ಮಾಡಿ ಸ್ವಚ್ಛ ಭಾರತದ ಕನಸು ಗಾಳಿಗೆ ತುರಿದೆ.
9 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಶೌಚಾಲಯಕ್ಕೆ ಗತಿ ಇಲ್ಲದಂತಾಗಿದೆ. ಜಾತ್ರೋತ್ಸವದಲ್ಲಿ ಬಂದಿರುವ ಸಾರ್ವಜನಿಕರು ಭಕ್ತರು ಪ್ರತ್ಯೇಕವಾಗಿ ಉಪಯೋಗಿಸಲು ಶೌಚಾಲಯ ಸರಿಯಿಲ್ಲ ಹೆಂಗಸರು ಮಕ್ಕಳು ದೇವಸ್ಥಾನಕ್ಕೆ ಬಂದರೆ ಮೂಗುಮುಚ್ಚಿಕೊಂಡು ಒಳಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಒದಗಿಬಂದಿದೆ ದೇವಸ್ಥಾನದ ಆಡಳಿತ ಮಂಡಳಿ ಇದರ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುವುದೇ ಪಬ್ಲಿಕ್ ನೆಕ್ಸ್ಟ್ ಕಳಕಳಿ.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ
Kshetra Samachara
11/01/2021 12:49 pm