ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಭರದಿಂದ ಸಾಗಿದೆ ಪುತ್ತಿಗೆ ಸೇತುವೆ ಕಾಮಗಾರಿ; ಆಗುಂಬೆ ಘಾಟ್ ಇನ್ನಷ್ಟು ಹತ್ತಿರ!

ಹಿರಿಯಡ್ಕ: ಉಡುಪಿಯ ಹಿರಿಯಡ್ಕ ಸಮೀಪದ ಪುತ್ತಿಗೆ ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಈ ಮೂಲಕ ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ಸಂಪರ್ಕ ಇನ್ನಷ್ಟು ಹತ್ತಿರ ಆಗಲಿದೆ. ಈಗಾಗಲೇ ಇಲ್ಲಿ ಹಳೆ ಸೇತುವೆ ಮೂಲಕ ವಾಹನ ಸಂಚಾರ ಇತ್ತು.ಇದೀಗ ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭಾಗವಾಗಿ ಪುತ್ತಿಗೆ ಸೇತುವೆ ಕಾಮಗಾರಿ ನಡೆಯುತ್ತಿದೆ.

ಈ ತನಕ ಉಡುಪಿಯಿಂದ ಆಗುಂಬೆ ಘಾಟ್ ಮೂಲಕ ಶೃಂಗೇರಿ,ಚಿಕ್ಕಮಗಳೂರಿಗೆ ಹೋಗುವವರು ಕಾರ್ಕಳ ಮೂಲಕ ಹೋಗುತ್ತಿದ್ದರೆ, ಪುತ್ತಿಗೆ ಸೇತುವೆ ನಿರ್ಮಾಣಗೊಂಡರೆ ಬರೀ ಅರ್ಧ ತಾಸಿನಲ್ಲಿ ಆಗುಂಬೆ ಘಾಟ್ ತಲುಪಬಹುದು. ಹೀಗಾಗಿ ಒಂದು ತಾಸಿನ ಸಮಯ ಇದರಿಂದ ಉಳಿತಾಯ ಆಗಲಿದೆ.

ಈಗಾಗಲೇ ಹೊಸ ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಮುಂದಿನ ಮಳೆಗಾಲ ಆರಂಭವಾಗುವ ಒಳಗೆ ಸೇತುವೆ ನಿರ್ಮಾಣ ಮಾಡಿ ಮುಗಿಸುವ ಗುರಿಯನ್ನೂ ಇಟ್ಟುಕೊಳ್ಳಲಾಗಿದೆ. ಆದಷ್ಟು ಬೇಗ ಈ ಸೇತುವೆ ಕಾರ್ಯ ಪೂರ್ಣಗೊಳ್ಳಲಿ ಎಂಬ ಒತ್ತಾಯ ಈ ಭಾಗದ ಜನರದ್ದು.

Edited By :
Kshetra Samachara

Kshetra Samachara

08/10/2020 04:03 pm

Cinque Terre

22.39 K

Cinque Terre

1

ಸಂಬಂಧಿತ ಸುದ್ದಿ