ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದೊಂದಿಗೆ 5ನೇ ಆವೃತ್ತಿಯ "ಮಣಿಪಾಲ್ ಮ್ಯಾರಥಾನ್ 2022" ಫೆಬ್ರವರಿ 13 ಕ್ಕೆ ನಡೆಯಲಿದೆ.
ಈ ಬಗ್ಗೆ ಇಂದು ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಲಾಯಿತು. ಶಾಸಕ ಕೆ. ರಘುಪತಿ ಭಟ್ ಹಾಗೂ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾll ಎಚ್. ಎಸ್. ಬಲ್ಲಾಳ್ ದಿನಾಂಕವನ್ನು ಘೋಷಣೆ ಮಾಡಿದರು.
Kshetra Samachara
26/10/2021 03:19 pm