ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಂತರಾಷ್ಟೀಯ ಬಾಲ್ಯ ಕ್ಯಾನ್ಸರ್ ದಿನ ಆಚರಣೆ

ಮಣಿಪಾಲ: ಅಂತರಾಷ್ಟೀಯ ಬಾಲ್ಯ ಕ್ಯಾನ್ಸರ್ ದಿನವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ಮತ್ತು ರಕ್ತಶಾಸ್ತ್ರ ವಿಭಾಗವು ಇಂದು ಆಚರಿಸಿತು. ಕಾರ್ಯಕ್ರಮದ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಪ್ರತೀ ವರ್ಷ 15ನೇ ಫೆಬ್ರವರಿಯಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. “ಉತ್ತಮ ಬದುಕುಳಿಯುವಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಡಾ. ಶರತ್ ಕೆ ರಾವ್, ಡೀನ್ ಕೆಎಂಸಿ , ಡಾ. ಅವಿನಾಶ್ ಶೆಟ್ಟಿ , ವೈದ್ಯಕೀಯ ಅಧೀಕ್ಷಕರು ಜಂಟಿಯಾಗಿ ಕ್ಯಾನ್ಸರ್ ನಿಂದ ಮುಕ್ತರಾದ ಮಕ್ಕಳೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಶರತ್ ರಾವ್ ಅವರು, " ಪ್ರತೀ ವರ್ಷ ಜಗತ್ತಿನಾದ್ಯಂತ ಸುಮಾರು ಮೂರು ಲಕ್ಷ ಮಕ್ಕಳು ಹೊಸದಾಗಿ ಕ್ಯಾನ್ಸರ್ ಗೆ ತುತ್ತಾಗುತ್ತಾರೆ. ಭಾರತದಲ್ಲಿ ಇದರ ಸಂಖ್ಯೆ 40ಸಾವಿರದಿಂದ 45 ಸಾವಿರದಷ್ಟು. ಸರಿಯಾದ ಸಮಯದಲ್ಲಿ ರೋಗ ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ಸರಿಯಾದ ಕೇಂದ್ರದಲ್ಲಿ ಚಿಕಿತ್ಸೆ ನೀಡಿದರೆ, ಮಕ್ಕಳ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇಕಡ 80 ರಿಂದ 90 ರಷ್ಟು ಮಂದಿಗೆ ವಾಸಿಯಾಗುವಂತೆ ಮಾಡಿದ್ದಾರೆ. ಭಾರತದಲ್ಲಿ ಇದರ ಪ್ರಮಾಣ ಶೇಕಡಾ ೫೦ರಿಂದ ಒಳಗೆ ಇದೆ. ಇದಕ್ಕೆ ಕಾರಣ ರೋಗಪತ್ತೆ ಹಚ್ಚುವಲ್ಲಿನ ವಿಳಂಬ. ಮೂಢನಂಬಿಕೆ ಮತ್ತು ಸರಿಯಾಗಿ ಚಿಕಿತ್ಸೆ ನೀಡುವ ಕೇಂದ್ರಗಳ ಕೊರತೆ. ಯಾವುದೇ ಮಕ್ಕಳಿಗೆ ತೂಕ ಕಡಿಮೆಯಾಗವುದು, ಮಲಬದ್ಧತೆ, ಮೈಯಲ್ಲಿ ಗಂಟುಗಳು ಕಾಣಿಸುವುದು ಅಥವಾ ಊತ ಬರುವುದನ್ನು ನಿರ್ಲಕ್ಷಿಸಬಾರದು" ಎಂದರು.

Edited By : Nirmala Aralikatti
Kshetra Samachara

Kshetra Samachara

15/02/2021 08:00 pm

Cinque Terre

3.9 K

Cinque Terre

1

ಸಂಬಂಧಿತ ಸುದ್ದಿ