ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಡಾ.ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಬೋಧಕ, ಬೋಧಕೇತರ ಸಂಘದ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ

ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೋಧಕ ಮತ್ತು ಬೋಧಕೇತರ ಸಂಘದ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು‌. ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಉಪನ್ಯಾಸಕ ಯೋಗಿಶ್ ಶ್ಯಾನುಭೋಗ್‌ರವರಿಗೆ ಮತ್ತು ಇನ್ನೊರ್ವರಾದ ಶ್ರೀಲತಾ ಇವರಿಗೆ ಸಂಘದಿಂದ ಉಡುಗೊರೆ ನೀಡಲಾಯಿತು.

ಉಪನ್ಯಾಸಕಿಯರಾದ ಆಶಾ ಶೆಟ್ಟಿ, ಸ್ವಸ್ತಿ ಶೆಟ್ಟಿ, ಸಂಗೀತಾ, ಸಂದೀಪ್ ಶೆಟ್ಟಿ, ಹರೀಶ್, ಕಾಲೇಜು ಬಗೆಗಿನ ಅವರ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮ ಆಯೋಜಿಸಿದ ಬೋಧಕ ಬೋಧಕೇತರ ಸಂಘದ ಕಾರ್ಯದರ್ಶಿ ಸತೀಶ್ ಕಾಂಚನ್ ಧನ್ಯವಾದ ಸಲ್ಲಿಸಿದರು.‌ ನಂತರ ಬೋಧಕ ಮತ್ತು ಬೋಧಕೇತರರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಎಲ್ಲರಿಗೂ ಭೋಜನ ಏರ್ಪಡಿಸಲಾಗಿತ್ತು. ಭೋಜನದ ನಂತರ ವಿವಿಧ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

Edited By : PublicNext Desk
Kshetra Samachara

Kshetra Samachara

11/08/2021 10:02 am

Cinque Terre

1.86 K

Cinque Terre

0

ಸಂಬಂಧಿತ ಸುದ್ದಿ