ಕೋಟ: ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಲ್ಲಿ ಕರ್ಕಾಟಕ ಸಂಕ್ರಮಣದ ಪ್ರಯುಕ್ತ ವಿಶೇಷವಾಗಿ ಲೋಕ ಕಲ್ಯಾಣಾರ್ಥ ಗಣಪತಿ ಅಥರ್ವಶೀರ್ಷ ಹೋಮ ಸಂಪನ್ನಗೊಂಡಿತು.
ದೇವಳದ ತಂತ್ರಿ ವೇದಮೂರ್ತಿ ಕೃಷ್ಣ ಸೋಮಯಾಜಿ ಆಚಾರ್ಯತ್ವದಲ್ಲಿ, ಸಹ ಋತ್ವಿಜರ ಸಹಕಾರದೊಂದಿಗೆ ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಮಿಯಾಪದವು ಆರ್.ಎಂ. ಶ್ರೀಧರ ರಾವ್ ದಂಪತಿ ಯಜಮಾನತ್ವದಲ್ಲಿ ನೆರವೇರಿತು.ಹೋಮದ ನಂತರ ಲೋಕ ಕಲ್ಯಾಣಕ್ಕಾಗಿ ಮತ್ತು ಉತ್ತಮ ಮಳೆಬೆಳೆಗಾಗಿ ಶ್ರೀದೇವರಲ್ಲಿ ಪ್ರಾರ್ಥಿಸಲಾಯಿತು.
ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ .ಎಸ್. ಕಾರಂತ, ಕಾರ್ಯದರ್ಶಿ ಪಿ. ಲಕ್ಷ್ಮೀನಾರಾಯಣ ತುಂಗ, ಕೋಶಾಧಿಕಾರಿ ಪರಶುರಾಮ ಭಟ್ಟ, ಸದಸ್ಯರಾದ ಪಿ. ಸದಾಶಿವ ಐತಾಳ, ಕೂಟ ಮಹಾಜಗತ್ತಿನ ವಿವಿಧ ಅಂಗ ಸಂಸ್ಥೆಗಳ ಸದಸ್ಯರು, ಗ್ರಾಮ ಮೊಕ್ತೇಸರರು ಭಾಗಿಯಾಗಿದ್ದರು.
Kshetra Samachara
19/07/2022 04:20 pm