ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಅರುಣಾಚಲ ಪ್ರದೇಶದ ಪಂಚಾಯತ್ ರಾಜ್ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿಯೋಗ ಹೆಬ್ರಿ ಪಂಚಾಯತ್ ಗೆ ಭೇಟಿ

ಹೆಬ್ರಿ: ಅರುಣಾಚಲ ಪ್ರದೇಶ ರಾಜ್ಯದ ಪಂಚಾಯತ್ ರಾಜ್ ನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿಯೋಗ ಹೆಬ್ರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಸಂಕೀರ್ಣ, ನರ್ಸರಿ ತೋಟ ವೀಕ್ಷಣೆ ಮತ್ತು ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಮಾಹಿತಿಯನ್ನು ಪಡೆದುಕೊಂಡಿತು. ತಮ್ಮ ರಾಜ್ಯದಲ್ಲಿ ಅನುಸರಣೆ ಮಾಡಲು ಸಾಧಕ ಬಾಧಕಗಳ ಬಗ್ಗೆ ಸಂವಾದಲ್ಲಿ ಬಾಗವಹಿಸಿತು.

ಹೆಬ್ರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಾಲತಿ ಅವರ ನೇತೃತ್ವದಲ್ಲಿ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡು ಮಾಹಿತಿ ವಿನಿಮಯ ನಡೆಸಲಾಯಿತು.ಮತ್ತು ರಾಜ್ಯ ತಂಡ ಹೆಬ್ರಿ ಗ್ರಾಮ ಪಂಚಾಯಿತಿನ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು.

ನಿಯೋಗವನ್ನು ಸಾಂಪ್ರದಾಯಿಕವಾಗಿ ತಿಲಕವಿಟ್ಟು ಪುಷ್ಪ ಸಿಂಚನ ಮತ್ತು ಪುಷ್ಪ ನೀಡುವುದರದ ಮುಖಾಂತರ ಸ್ವಾಗತಿಸಲಾಯಿತು ಮತ್ತು ತುಳುನಾಡಿನ ಮುಟ್ಟಾಳೆ ತೊಡಿಸಿ ಗೌರವಿಸಲಾಯಿತು.

Edited By : PublicNext Desk
Kshetra Samachara

Kshetra Samachara

25/06/2022 02:40 pm

Cinque Terre

848

Cinque Terre

0

ಸಂಬಂಧಿತ ಸುದ್ದಿ