ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಯುವತಿಯರಿಗಾಗಿ ಉಚಿತ ಹ್ಯಾಂಡ್ ಎಂಬ್ರಾಯ್ಡರಿ , ಜುವೆಲ್ಲರಿ ಮೇಕಿಂಗ್ ಕಾರ್ಯಾಗಾರ

ಕಾರ್ಕಳ : ಪ್ಯಾಶನ್ ಇಂದಿನ ಪ್ರಮುಖ ಆಕರ್ಷಣೆ. ಪ್ಯಾಶನ್ ಬಗ್ಗೆ ಆಕರ್ಷಿತರಾಗದ ಮಹಿಳೆಯರು ತುಂಬಾ ವಿರಳ. ಎಲ್ಲರೂ ಪ್ಯಾಶನ್ ನೇಬಲ್ ಇರಲು ಇಷ್ಟಪಡುತ್ತಾರೆ ಅಂತಹ ಇಷ್ಟ ಪಡುವ ಜನರ ಅಭಿರುಚಿಗೆ ತಕ್ಕಂತೆ ಪ್ಯಾಶನ್ ಸಾಮಾಗ್ರಿಗಳನ್ನು ತಯಾರಿಸಬೇಕಾಗಿದೆ. ಮಾತ್ರವಲ್ಲದೆ ತಯಾರಿಸಿದ ವಸ್ತುಗಳಲ್ಲಿ ವಿವಿಧತೆಯನ್ನು ನೀಡುವ ಕ್ರಿಯಾಶೀಲತೆ ತಮ್ಮಲ್ಲಿ ಬೆಳೆಸಬೇಕಾಗಿದೆ.ಈ ನಿಟ್ಟಿನಲ್ಲಿ ತಾವು ಪ್ಯಾಶನ್ ಬಗ್ಗೆ ಅರಿತು ಕಲಿಯಬೇಕು. ಆಗ ಮಾತ್ರ ಪ್ಯಾಶನ್ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಡಾ. ಹರ್ಷಾ ಕಾಮತ್ ಅವರು ತಿಳಿಸಿದರು.

ಅವರು ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ಆಶ್ರಯದಲ್ಲಿ ಎಸ್. ಜೆ ಆರ್ಕೇಡ್ ಕಾರ್ಕಳದಲ್ಲಿ ನಡೆದ ಒಂದು ವಾರಗಳ 16 ರಿಂದ 35 ವರ್ಷದ ಯುವತಿಯರಿಗಾಗಿ ಏರ್ಪಡಿಸಿದ್ದ ಉಚಿತ ಹ್ಯಾಂಡ್ ಎಂಬ್ರಾಯ್ಡರಿ , ಜುವೆಲ್ಲರಿ ಮೇಕಿಂಗ್ , ಸಾರಿಗೊಂಡೆ , ಫ್ಯಾಬ್ರಿಕ್ ಪೈಂಟಿಂಗ್ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ಮುಖ್ಯಸ್ಥೆ ಸಾಧನ ಜಿ ಆಶ್ರೀತ್ ಅಧ್ಯಕ್ಷತೆ ವಹಿಸಿದ್ದರು. ಚಂದನಾ ಕಾರ್ಯಕ್ರಮ ನಿರೂಪಿಸಿದರು. ಜಯಂತಿ ಸ್ವಾಗತಿಸಿ, ಸಾಧನ ವಂದಿಸಿದರು.

Edited By : PublicNext Desk
Kshetra Samachara

Kshetra Samachara

12/06/2022 05:33 pm

Cinque Terre

2.18 K

Cinque Terre

0

ಸಂಬಂಧಿತ ಸುದ್ದಿ