ಕುಂದಾಪುರ :ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎ.14 ರಿಂದ 16 ರವರೆಗೆ ಮೂರು ದಿನಗಳ ಕಾಲ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಪೂರ್ವ ತಯಾರಿ ಈಗಾಗಲೇ ಪ್ರಾರಂಭವಾಗಿದ್ದು,ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ.ಎ.ವಿ.ನಾವಡ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.
ಎ.14 ರಂದು ಸಳ್ವಾಡಿ ಭಾಸ್ಕರ್ ಶೆಟ್ಟಿ ಅವರಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾವನಮನ ಕಾರ್ಯಕ್ರಮ, ಯಕ್ಷಗಾನ ತಾಳ ಮದ್ದಳೆ, ಬೈಂದೂರಿನ ಸುರಭಿ ತಂಡದಿಂದ ನನ್ನೊಳಗೊಬ್ಬ ನಾಟಕ ಪ್ರದರ್ಶನ, ಹೋಳಿ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಎ.15 ರಂದು ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಂತರ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲಕುಮಾರ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹಾಗೂ ವಿವಿಧ ಕ್ಷೇತ್ರದ ಪ್ರಮುಖರು ಉಪಸ್ಥಿತರಿರುತ್ತಾರೆ. ಪುಸ್ತಕ ಬಿಡುಗಡೆ ಹಾಗೂ ಸಾಧಕರ ಸನ್ಮಾನ ನಡೆಯಲಿದೆ.
ಕುಂದಾಪುರ ಕನ್ನಡ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯತೆ, ರಂಗಭೂಮಿ, ಪತ್ರಿಕೋದ್ಯಮದ ಸವಾಲುಗಳು, ಉಡುಪಿ ಶಾಸನಗಳು, ಮಹಿಳೆ ಮತ್ತು ಸಾಮರಸ್ಯ ಕುರಿತಾದ ಗೋಷ್ಠಿಗಳು ನಡೆಯಲಿದೆ. ಗಣೇಶ್ ಪಾಂಡೇಲ ಅವರ ಸಮನ್ವಯದಲ್ಲಿ ವಿಕ್ರಮ್ ಹತ್ವಾರ್ ಅವರ ಆಶಯ ಭಾಷಣದಲ್ಲಿ ಕವಿಗೋಷ್ಠಿ ನಡೆಯಲಿದೆ.
Kshetra Samachara
13/04/2022 08:51 pm