ಉಡುಪಿ: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಒಡಿಸ್ಸಾದ ಭುವನೇಶ್ವರದಲ್ಲಿ ಇತ್ತೀಚೆಗೆ ನಡೆದ ಸೆಲೆಕ್ಷನ್ ಟ್ರಯಲ್ಸ್‌ನ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದ ಅಜ್ಜರಕಾಡು ಸರಕಾರಿ ಪ್ರೌಢಶಾಲೆಯ 10ನೆ ತರಗತಿ ವಿದ್ಯಾರ್ಥಿನಿ, ಹಿಲಿಯಾಣ ಗ್ರಾಮದ ಮಾಧುರ್ಯ ಶೆಟ್ಟಿ, ಫ್ರಾನ್ಸ್‌ನಲ್ಲಿ ಮೇ ತಿಂಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕೃಷ್ಣಮೂರ್ತಿ ಶೆಟ್ಟಿ ಹಾಗೂ ಪೂರ್ಣಿಮ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಮಾಧುರ್ಯ ಅವರದ್ದು ತೀರಾ ಬಡ ಕುಟುಂಬ. ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು 2.5 ಲಕ್ಷ ರೂ. ಹಣದ ಅಗತ್ಯವಿದ್ದು, ದಾನಿಗಳು ಈ ಕ್ರೀಡಾಪಟುವಿಗೆ ಆರ್ಥಿಕ ನೆರವು ನೀಡುವಂತೆ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಚ್.ಲಿಂಗರಾಜು ಸುದ್ದಿಗೋಷ್ಠಿಯಲ್ಲಿಂದು ಮನವಿ ಮಾಡಿದ್ದಾರೆ.
Kshetra Samachara
25/03/2022 12:01 pm