ಕಾರ್ಕಳ:ರಾಜಕೀಯದ ಹೆಸರಿನಲ್ಲಿ ಛಿದ್ರವಾಗಿದ್ದ ಬಿಲ್ಲವ ಸಮಾಜ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಒಂದಾಗಲು ಮೊದಲ ಮೆಟ್ಟಿಲು ಎಂಬಂತೆ ಕಾರ್ಕಳದಿಂದ ಬೃಹತ್ ಸ್ವಾಭಿಮಾನ ಜಾಥಾ ನಾಳೆ ಹೊರಡಲಿದೆ ಎಂದು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘ ದ ಅಧ್ಯಕ್ಷ ಡಿ ಆರ್ ರಾಜು ತಿಳಿಸಿದ್ದಾರೆ.
ಜನವರಿ 26ನೇ ಬುಧವಾರ ಪೂರ್ವಾಹ್ನ 10-30 ಗಂಟೆಗೆ ಕಾರ್ಕಳ ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆಯಿಂದ ಹೊರಟು
ಕಟಪಾಡಿ ಶ್ರೀ ವಿಶ್ವನಾಥ ಕ್ಷೇತದವರೆಗೆ ಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ಹಾಗೂ ವಾಹನಗಳೊಂದಿಗೆ ಸಾಗಲಿದೆ. ಸ್ವಾಭಿಮಾನ ಜಾಥಾವು ಬಿಲ್ಲವ ಮುಖಂಡರಾದ ಭಾಸ್ಕರ್ ಕೋಟ್ಯಾನ್ ಮತ್ತು ಡಿ.ಆರ್. ರಾಜುರವರ ನೇತೃತ್ವದಲ್ಲಿ, ಬಿಲ್ಲವ ಜನಪ್ರತಿನಿಧಿಗಳ, ಧಾರ್ಮಿಕ , ಶೈಕ್ಷಣಿಕ, ಸಾಮಾಜಿಕ, ಗರಡಿ ಸಮಸ್ತ ಪೂಜಾರಿ, ಬಿಲ್ಲವ ಸಂಘ ಹಾಗೂ ಬಿಲ್ಲವ ಸಂಘಟನೆಗಳ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ. ಜಾಥಾಕ್ಕೆ ಗುರುಗಳ ಸನ್ನಿಧಿಯಲ್ಲಿ ಭಜನೆ ಮತ್ತು ವಿಶೇಷ ಪ್ರಾರ್ಥನೆಯ ಮೂಲಕ ಚಾಲನೆ ನೀಡಲಾಗುವುದು ಎಂದರು.
ಕಾರ್ಕಳ ಕೃಷ್ಣ ಕ್ಷೇತ್ರ ಆನೆಕೆರೆಯಲ್ಲಿ ಬೆಳಿಗ್ಗೆ 10-00ಗಂಟೆಗೆ ಉಪಹಾರ ಸ್ವೀಕರಿಸಿ ಹೊರಟು ಅನಂತಶಯನ - ಕಾರ್ಕಳ ಪೇಟೆಯ ಮುಖ್ಯರಸ್ತೆ- ಬಂಡೀಮಠ - ಅತ್ತೂರು-ನಿಟ್ಟೆ - 11-30 ಗಂಟೆಗೆ ಬೆಳ್ಮಣ್ ಬಿಲ್ಲವ ಸಂಘಕ್ಕೆ ಬಂದು ಅಲ್ಲಿ ಉಪಹಾರ ಸ್ವೀಕರಿಸಿ- ಬೆಳ್ಮಣ್,ಸೂಡ ಪಳ್ಳಿ -ರಂಗನಪಲ್ಕೆ -ಕಣಜಾರು - ಮದ್ಯಾಹ್ನ 01-30 ಗಂಟೆಗೆ ಬೈಲೂರು ಬಿಲ್ಲವ ಸಂಘದಲ್ಲಿ ಅನ್ನಪ್ರಸಾದ ಸ್ವೀಕರಿಸಿ- ಹಿರಿಯಡ್ಕ - 3-30ಗಂಟೆಗೆ ಬನ್ನಂಜೆ ಬಿಲ್ಲವ ಸಂಘದಲ್ಲಿ ಉಡುಪಿ ಜಿಲ್ಲೆಯ ಸ್ವಾಭಿಮಾನದ ಜಾಥಾದಲ್ಲಿ ಭಾಗವಹಿಸಿದ ಎಲ್ಲಾ ವಾಹನಗಳು -ಸಾಯಂಕಾಲ 04-30 ಗಂಟೆಗೆ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಿರ್ಗಮಿಸಲಿದೆ. ಕೇವಲ ಹಳದಿ ಬಣ್ಣದ ಧ್ವಜಗಳನ್ನ ವಾಹನಗಳಿಗೆ ಹಾಕಿ, ಹಳದಿ ಶಾಲುಗಳನ್ನೇ ಧರಿಸಿಕೊಂಡು ಬರಬೇಕು ಎಂದು ವಿನಂತಿಸಿದ್ದಾರೆ.
Kshetra Samachara
25/01/2022 04:57 pm