ಉಡುಪಿ: ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿಯವರು ಭಾನುವಾರ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೇಜಾವರ ಮಠಕ್ಕೆ ಭೇಟಿ ನೀಡಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳೊಡನೆ ಕೆಲಹೊತ್ತು ಸಮಾಲೋಚನೆ ನಡೆಸಿದರು.
ಶ್ರೀಪಾದರಿಗೆ ಭಕ್ತಿ ಗೌರವ ಅರ್ಪಿಸಿದ ಅವಸ್ಥಿಯವರನ್ನು ಶ್ರೀಗಳೂ ಫಲಮಂತ್ರಾಕ್ಷತೆ ನೀಡಿ ಅಭಿನಂದಿಸಿದರು . ಶ್ರೀಗಳ ಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ಯರು ನ್ಯಾಯಾಧೀಶರನ್ನು ಬರಮಾಡಿಕೊಂಡರು .
Kshetra Samachara
27/12/2021 07:22 pm