ಉಡುಪಿ: ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ, ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆಯ ದೀಪೋತ್ಸವ ನಡೆಯಿತು.ಇಲ್ಲಿ ಏಕಕಾಲದಲ್ಲಿ ನಡೆದ ಅಷ್ಟ ಸಪ್ತತಿ (78) ದುರ್ಗಾ ನಮಸ್ಕಾರ ಪೂಜೆಯು ದಾಖಲೆಯನ್ನೇ ನಿರ್ಮಿಸಿದೆ.
ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗ ದರ್ಶನದಲ್ಲಿ ಶ್ರೀ ಕಾಣಿಯೂರು ` ಮಠದ ಶ್ರೀ ವಿದ್ಯಾವಲ್ಲಭತೀರ್ಥ `ಶ್ರೀಪಾದರ ಉಪಸ್ಥಿತಿಯಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ದುರ್ಗಾಪೂಜೆ ಸಂಪನ್ನಗೊಂಡಿತು.
ಶ್ರೀ ದುರ್ಗಾ ಆದಿಲಕ್ಷ್ಮೀ ಮಂಟಪದಲ್ಲಿ 25 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಪಂಚವರ್ಣಾತ್ಮಕವಾದ ಮಂಡಲ ರಚಿಸಿ 78 ಮಂಡಲಗಳನ್ನೂ 78 ದೇವಿನಾಮದಿಂದ ಆರಾಧಿಸಿ ವಿಧ-ವಿಧದ ಹೂವುಗಳಿಂದ ಸಿಂಗರಿಸಿ, ಪೂಜಿಸಲಾಯಿತು. 5 ಸಾವಿರಕ್ಕೂ ಮಿಕ್ಕಿದ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಅಚ್ಚುಕಟ್ಟಾದ ವ್ಯವಸ್ಥೆ ಹಾಗೂ ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಶ್ರೀ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.
Kshetra Samachara
06/12/2021 04:27 pm