ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವತಿಯಿಂದ ಮಧುಮೇಹ ದಿನದ ಅಂಗವಾಗಿ ಸೈಕಲ್ ಜಾಥಾ

 

ಮಣಿಪಾಲ:ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಂತಃಸ್ರಾವಶಾಸ್ತ್ರ (ಎಂಡೋ ಕ್ರೈ ನೊಲೊಜಿ) ವಿಭಾಗವು ಮಧುಮೇಹ ದಿನದ ಅಂಗವಾಗಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ಆಯೋಜಿಸಿತ್ತು. "ಮಧುಮೇಹ ಆರೈಕೆಯ  ಸಾರ್ವತ್ರಿಕ ಲಭ್ಯತೆ , ಈಗ ಇಲ್ಲದಿದ್ದರೆ, ಯಾವಾಗ ?" ಎಂಬುದು ಈ ವರ್ಷದ ಧ್ಯೇಯವಾಕ್ಯವಾಗಿತ್ತು.

ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್.ಬಲ್ಲಾಲ್ ಅವರು   ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಹೊರರೋಗಿ ವಿಭಾಗದ ಮುಂದೆ  ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. ಮಣಿಪಾಲದಿಂದ ಆರಂಭವಾದ ಜಾಥಾವು , ಸಿಂಡಿಕೇಟ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಬನ್ನಂಜೆ, ಕರಾವಳಿ ಸರ್ಕಲ್, ಅಂಬಲಪಾಡಿ, ಬ್ರಹ್ಮಗಿರಿ ಮೂಲಕ ಅಜ್ಜರಕಾಡು ಕ್ರೀಡಾಂಗಣದಲ್ಲಿ  ಸಮಾಪನಗೊಂಡಿತು.  ಭಾಗವಹಿಸಿದವರಿಗೆ  ಕ್ರೀಡಾಂಗಣದಲ್ಲಿ ಜುಂಬಾ ಸೆಷನ್‌ಗಳನ್ನು  ಆಯೋಜಿಸಲಾಗಿತ್ತು. 500 ಕ್ಕೂ ಹೆಚ್ಚು ಜನರು ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಕೊನೆಗೆ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ  ಸಮಾರೋಪ ಸಮಾರಂಭದಲ್ಲಿ ಡಾ. ಎಚ್ ಎಸ್ ಬಲ್ಲಾಳ್, ಸಹ ಕುಲಾಧಿಪತಿಗಳು  ಮಾಹೆ ಮಣಿಪಾಲ, ಡಾ. ಪಿ ಎಲ್ ಎನ್ ಜಿ ರಾವ್ , ಸಹ ಕುಲಪತಿ, ಆರೋಗ್ಯವಿಜ್ಞಾನ ,  ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ನ ಡೀನ್ ಡಾ. ಅರುಣ್ ಮಯ್ಯ , ಕೆ ಎಂ ಸಿ ಡೀನ್ , ಡಾ. ಶರತ್ ಕೆ ರಾವ್ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ  ಸಹ ನಿರ್ದೇಶಕರಾದ ಡಾ. ರೋಶನ್  ಶೆಟ್ಟಿ , ಮುಖ್ಯ ನಿರ್ವಹಣಾಧಿಕಾರಿಗಳಾದ ಸಿ ಜಿ ಮುತ್ತಣ್ಣ , ವೈದ್ಯಕೀಯ ಅಧೀಕ್ಷಕರಾದ  ಡಾ.ಅವಿನಾಶ್ ಶೆಟ್ಟಿ  ಮತ್ತು ಅಂತಃಸ್ರಾವಶಾಸ್ತ್ರ (ಎಂಡೋ ಕ್ರೈ ನೊಲೊಜಿ)  ವಿಭಾಗದ ಮುಖ್ಯಸ್ಥರಾದ  ಡಾ.ಸಹಾನಾ ಶೆಟ್ಟಿ ಅವರು ಉಪಸ್ಥಿತರಿದ್ದರು.

 

Edited By : PublicNext Desk
Kshetra Samachara

Kshetra Samachara

15/11/2021 03:17 pm

Cinque Terre

746

Cinque Terre

0

ಸಂಬಂಧಿತ ಸುದ್ದಿ