ಪಡುಬಿದ್ರೆ : ಪಡುಬಿದ್ರೆಯ ವಿಶ್ವಪ್ರಸಿದ್ಧ ಬ್ಲೂ ಫ್ಲಾಗ್ ಬೀಚ್ ನಲ್ಲಿ ಇಂದು ವರ್ಣವಿಹಾರ 2021 ಅಪರೂಪದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಉಭಯ ಜಿಲ್ಲೆಗಳ ಶಾಲಾ ವಿದ್ಯಾರ್ಥಿಗಳಿಗಾಗಿ ಬೀಚಿನಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕಾರ್ಯಕ್ರಮವನ್ನು ಪಡುಬಿದ್ರೆ ರೋಟರಿ ಕ್ಲಬ್, ಪಡುಬಿದ್ರೆ ಎಂಡ್ಪಾಯಿಂಟ್ ಬ್ಲೂ ಫ್ಲಾಗ್ ಬೀಚ್ ಮತ್ತು ಉಜ್ವಲ್ ಪ್ರಿಂಟರ್ಸ್ ಆಯೋಜಿಸಿತ್ತು.ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಯು.ಟಿ ಖಾದರ್ ಭಾಗವಹಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ರಮೇಶ್ ಬಂಟಕಲ್ಲು, ಮಹಮ್ಮದ್ ನಿಯಾಝ್, ವಿಜೇತ್ ನಾಯಕ್, ಸುಧೀರ್ ಕುಮಾರ್, ರವಿ ಶೆಟ್ಟಿ, ತಸ್ನೀನ್ ಅರಾ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/11/2021 10:01 pm