ಉಡುಪಿ: ಗಾನ ಗಂಧರ್ವ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು 2004-06 ಅದಮಾರು ಪರ್ಯಾಯ ಸಂದರ್ಭ ಮತ್ತು 2005ರ ನವರಾತ್ರಿ ಹಬ್ಬದಂದು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಅದಮಾರು ಹಿರಿಯ ಶ್ರೀಪಾದರಾದ ವಿಶ್ವಪ್ರಿಯತೀರ್ಥರು ಅವರನ್ನು ಸನ್ಮಾನಿಸಿದ್ದು, ತುಂಬ ಹೆಮ್ಮೆ ಎನಿಸಿತ್ತು ಎಂದು ಅದಮಾರು ಶ್ರೀಗಳು ಬಾಲಸುಬ್ರಹ್ಮಣ್ಯಂ ಕುರಿತ ನೆನಪನ್ನು ಸ್ಮರಿಸಿಕೊಂಡಿದ್ದಾರೆ.
ಅಗಲಿದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಆತ್ಮಕ್ಕೆ ಚಿರಶಾಂತಿಗಾಗಿ ಅದಮಾರು ಮಠದ ಹಿರಿಯ ಶ್ರೀಪಾದರಾದ ವಿಶ್ವಪ್ರಿಯತೀರ್ಥರು ಹಾಗೂ ಪರ್ಯಾಯ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸಿದ್ದಾಗಿ ಮಠದ ಪ್ರಕಟಣೆ ತಿಳಿಸಿದೆ.
Kshetra Samachara
25/09/2020 09:54 pm