ಉಡುಪಿ : ಸಾಂಸ್ಕೃತಿಕ ಕಲಾಸಂಸ್ಥೆ ತುಳುಕೂಟ ಉಡುಪಿ ಇದರ 2022-23ನೇ ನೂತನ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪುನರಾಯ್ಕೆ ಯಾಗಿದ್ದಾರೆ.ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆದ ತುಳುಕೂಟದ ವಾರ್ಷಿಕ ಮಹಾಸಭೆಯಲ್ಲಿನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ದಿವಾಕರ ಸನಿಲ್ ಹಾಗೂ ಸದಾಶಿವ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಕಿದಿಯೂರ್, ಜತೆ ಕಾರ್ಯದರ್ಶಿಗಳಾಗಿ ಮೋಹನ್ ಶೆಟ್ಟಿ ಮೂಡನಿಡಂಬೂರು, ಉದಯ ಕುಮಾರ್, ರಶ್ಮಿರಮೇಶ್ ಶೆಣೈ, ಕೋಶಾಧಿಕಾರಿಯಾಗಿ ಎಂ.ಜಿ.ಚೈತನ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ಮನೋಹರ್ ಶೆಟ್ಟಿ ತೋನ್ಸೆ, ಸಂತೋಷ್ ಕುಮಾರ್, ಆಂತರಿಕ ಲೆಕ್ಕಪರಿಶೋಧಕರಾಗಿ ಯು.ಜೆ.ದೇವಾಡಿಗ ಆಯ್ಕೆಯಾದರು.
Kshetra Samachara
07/09/2022 12:59 pm