ಮುಲ್ಕಿ: ಮುಲ್ಕಿಯ ಕಾರ್ನಾಡು ಗಾಂಧಿ ಮೈದಾನದಲ್ಲಿ ನಡೆದ ಕಾರ್ನಾಡು ಫ್ರೆಂಡ್ಸ್ ಸೌಹಾರ್ದ ಟ್ರೋಪಿ- 2020 ಗ್ರಾಮೀಣ ಮಟ್ಟದ ಹಾಗೂ ದ.ಕ., ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಅಲೆವೂರು ಫ್ರೆಂಡ್ಸ್ ತಂಡ ಜೆಡಿವೈ ಸಿ ಕೊಳಚಿಕಂಬಳ ಮುಲ್ಕಿ ತಂಡವನ್ನು ಸೋಲಿಸಿ ಟ್ರೋಫಿ ಹಾಗೂ ನಗದು ಪುರಸ್ಕಾರ ಪಡೆಯಿತು.
ಅಂತಿಮ ಪಂದ್ಯದ ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠನಾಗಿ ಅಲೆವೂರು ಕ್ರಿಕೆಟರ್ಸ್ ತಂಡದ ಪವನ್, ಉತ್ತಮ ದಾಂಡಿಗನಾಗಿ ಕೊಳಚಿಕಂಬಳ ತಂಡದ ಆಕಾಶ್, ಉತ್ತಮ ಎಸೆತಗಾರನಾಗಿ ಸಾಗರ್ ಸಾಗ್ ತಂಡದ ರಿಷಾ ಬಹುಮಾನ ಪಡೆದರು. ಕ್ರಿಕೆಟ್ ಪಂದ್ಯಾವಳಿ ಸಮಾರೋಪದ ಅಧ್ಯಕ್ಷತೆಯನ್ನು ಉದ್ಯಮಿ ಅನಿಲ್ ಕೊಲಕಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಲ್ಕಿ ನ.ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಪುತ್ತುಬಾವ, ಹರ್ಷ ರಾಜ ಶೆಟ್ಟಿ, ಉದ್ಯಮಿ ರಮಾನಾಥ ಪೈ ಮುಲ್ಕಿ, ಸೆವೆನ್ ಸ್ಟಾರ್ ಕ್ರಿಕೆಟರ್ಸ್ ಅಧ್ಯಕ್ಷ ಅಬ್ದುಲ್ ಖಾದರ್, ಕಾರ್ನಾಡು ಫ್ರೆಂಡ್ಸ್ ಕ್ರಿಕೆಟರ್ಸ್ ಅಧ್ಯಕ್ಷ ಸರ್ಫರಾಜ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಕೃಷಿ ಕ್ಷೇತ್ರದಲ್ಲಿ ಬಾಲಚಂದ್ರ ಸನಿಲ್, ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶರತ್ ಶೆಟ್ಟಿ ಪಡುಬಿದ್ರಿ, ಕೊರೊನಾ ವಾರಿಯರ್ ಅನಿತಾ ಮುಲ್ಕಿ, ಹಿರಿಯ ಕ್ರಿಕೆಟ್ ಆಟಗಾರ ಬಶೀರ್ ಅಹ್ಮದ್ ಅವರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು.
Kshetra Samachara
30/11/2020 06:12 pm