ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವರ ಸೇವೆ ಮಾಡಲು ಅಭಿಷೇಕವೇ ಆಗಬೇಕಿಲ್ಲ : ಭಕ್ತರ ಊಟ ಎಲೆ ಎತ್ತಿದ ಚಾರ್ಟೆಡ್ ಅಕೌಂಟೆಂಟ್

ಉಡುಪಿ: ಕೊರೊನಾ ಮಧ್ಯೆಯೂ ಜನ ದಸರಾ ಸಂಭ್ರಮದಲ್ಲಿದ್ದಾರೆ.

ನವದುರ್ಗೆಯರ ಆರಾಧನೆಯನ್ನು ಒಬ್ಬೊಬ್ಬ ಭಕ್ತರು ಒಂದೊಂದು ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ.

ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಉಡುಪಿಯಲ್ಲಿ ದೇವಿಯ ಸೇವೆಯನ್ನು ವಿಶೇಷವಾಗಿ ಮಾಡಿದ್ದಾರೆ.

ಇನ್ನೂ ಕಮಲಶಿಲೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸೇವೆ ಸಲ್ಲಿಸುತ್ತಾರೆ.

ತಮಿಳುನಾಡು ಮೂಲದ ರಾಜಶೇಖರ ಎಂಬವರು ದೇವಸ್ಥಾನದಲ್ಲಿ ಭಕ್ತರು ಊಟ ಮಾಡಿದ ಎಲೆಯನ್ನು ಎತ್ತುವುದು ಹಾಗೂ ಭಕ್ತರಿಗೆ ನೀರು, ದೇಗುಲದ ಎಲ್ಲಾ ಚಾಕರಿ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜಶೇಖರ್ ತಮಿಳುನಾಡಿನಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ಪ್ರತಿವರ್ಷ ನವರಾತ್ರಿ ದಿನದಂದು ತಾಯಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯ ಸೇವೆ ಮಾಡುತ್ತಾರೆ.

ರಾಜಶೇಖರ್, ನಾನು ಕೊಲ್ಲೂರಿಗೆ ಭೇಟಿ ಕೊಟ್ಟ ಸಂದರ್ಭ ಕಮಲಶಿಲೆ ದೇವಸ್ಥಾನದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ದೇವಸ್ಥಾನಕ್ಕೆ ಭೇಟಿ ಕೊಟ್ಟ ನಂತರ ಮನಸ್ಸಿಗೆ ಬಹಳ ಸಂತೋಷವಾಗಿದೆ.

ನವರಾತ್ರಿಯ ಸಂದರ್ಭದಲ್ಲಿ ಹತ್ತು ದಿನ ದೇವಸ್ಥಾನಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ನಾನು ಇಲ್ಲೇ ಇದ್ದು ಮಾಡುತ್ತಿದ್ದೇನೆ ಎಂದಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

22/10/2020 03:07 pm

Cinque Terre

3.69 K

Cinque Terre

1

ಸಂಬಂಧಿತ ಸುದ್ದಿ