ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ತುಳುನಾಡ ದೈವಾರಾಧಕರಿಗೆ ಶಾಸಕ ರಘುಪತಿ ಭಟ್ ರಿಂದ ಆಹಾರ ಸಾಮಗ್ರಿಗಳ ಕಿಟ್

ಉಡುಪಿ: ಕೊರೋನಾ 2ನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ತುಳುನಾಡ ದೈವಾರಾಧಕರು ಸಂಕಷ್ಟಕ್ಕೊಳಗಾಗಿದ್ದರು.ಇದನ್ನು ಮನಗಂಡು ಶಾಸಕ ಕೆ. ರಘುಪತಿ ಭಟ್ ತಮ್ಮ ವೈಯಕ್ತಿಕ ಹಣದಿಂದ ಉಡುಪಿ ಜಿಲ್ಲಾ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ.) ಇದರ 150 ಜನರಿಗೆ ಕೊಡಮಾಡಿದ ಆಹಾರ ಸಾಮಗ್ರಿಗಳ ಕಿಟ್ ನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ ಹಾಗೂ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್ ರವರು ಸಾಲಿಕೇರಿ ಗುಡೆಬೆಟ್ಟು ಗರಡಿಯಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಶ್ರೀಧರ್ ಪೂಜಾರಿ ಬೈಕಾಡಿ, ಉಪಾಧ್ಯಕ್ಷರಾದ ಸದಾನಂದ್ ಪೂಜಾರಿ ಬಿರ್ತಿ, ಪ್ರಧಾನ ಕಾರ್ಯದರ್ಶಿಯಾದ ನಿತ್ಯಾನಂದ ಪೂಜಾರಿ ಚಾಂತಾರು, ಹಾಗೂ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

22/09/2021 09:20 pm

Cinque Terre

2.25 K

Cinque Terre

0