ಪಡುಬಿದ್ರಿ: ಹೆದ್ದಾರಿ ಬದಿ ಅಳವಡಿಸಿದ್ದ ಕಬ್ಬಿಣ ತಡೆಬೇಲಿಗೆ ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ ಘಟನೆ ಕಾಂಜರಕಟ್ಟೆ ಬಳಿ ಗುರುವಾರ ನಡೆದಿದೆ. ಪಂಜಾಬ್ ಮೂಲದ ರಾಜ್‌ಕಿಶೋರ್ (28) ಮೃತಪಟ್ಟ ಸವಾರ.
ನಂದಿಕೂರು ಕೈಗಾರಿಕಾ ಪ್ರದೇಶದ ಆಹಾರ ಸಂಸ್ಕರಣಾ ಘಟಕದಲ್ಲಿ ಕರ್ತವ್ಯದಲ್ಲಿದ್ದ ರಾಜ್ ಕಿಶೋರ್ ಸ್ಕೂಟರ್‌ನಲ್ಲಿ ಪಡುಬಿದ್ರಿಯ ಕಿಶೋರ್ ಎಂಬುವರನ್ನು ಕುಳ್ಳಿರಿಸಿಕೊಂಡು ಬೆಳ್ಳನ್‌ನಿಂದ ಪಡುಬಿದ್ರಿ ಕಡೆ ಬರುತ್ತಿದ್ದಾಗ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ತಡೆಬೇಲಿಗೆ ಡಿಕ್ಕಿಯಾಗಿ ಅವರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕಾರ್ಕಳ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.ಸಹಸವಾರ ಕಿಶೋರ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
12/08/2022 01:14 pm