ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಾಗೂರು ಎಂಬಲ್ಲಿ ಇನ್ನೋವಾ ಕಾರು ಚತುಷ್ಪಥ ರಸ್ತೆ ನಡುವಿನ ನಡುವಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಕಾರವಾರ ಜಿಲ್ಲಾಪಂಚಾಯತ್ ಮಾಜಿ ಸದಸ್ಯ, ಕುಮುಟಾ ನಿವಾಸಿ ರತ್ನಾಕರ ನಾಯ್ಕ್ ಗಾಯಗೊಂಡಿದ್ದಾರೆ.
ಸೋಮವಾರ ಸಂಜೆ ರತ್ನಾಕರ ನಾಯ್ಕ್ ಹಾಗೂ ಆರ್.ಜೆ.ನಾಯ್ಕ್ ಎಂಬುವರು ಇನ್ನೋವಾ ಕಾರಿನಲ್ಲಿ ಮುಲ್ಕಿಯಿಂದ ಕುಮಟಾಕ್ಕೆ ಪ್ರಯಾಣಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಾಗೂರು ಎಂಬಲ್ಲಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ರಸ್ತೆ ನಡುವಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಕಾರು ನುಜ್ಜುಗಜ್ಜಾಗಿದ್ದು ರತ್ನಾಕರ ನಾಯ್ಕ್ ಕೈ ಬೆರಳುಗಳು ತುಂಡಾಗಿ ಬೇರ್ಪಟ್ಟಿತ್ತು. ಘಟನೆ ನಡೆದ ತಕ್ಷಣ ಸ್ಥಳದಲ್ಲಿದ್ದ ಹಿರಿಯ ವಿಕಲಚೇತನರಾದ ಜಮಾತ್ ಮಾಜಿ ಅಧ್ಯಕ್ಷರು. ಉಬೈದುಲ್ಲಾ ಎಂ ಏಚ್ ಎಂಬುವರು ಮಾನವೀಯತೆ ಮೆರೆದು ಗಾಯಾಳುಗಳನ್ನು ಅದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಆಂಬ್ಯುಲೆನ್ಸ್ ನಿಲ್ಲಿಸಿ ಆಸ್ಪತ್ರೆಗೆ ಸ್ವತಃ ತಾನು ಜೊತೆಯಾಗಿ ಕರೆದುಕೊಂಡು ಹೋದರು.
ಅಫಘಾತ ಸ್ಥಳದಲ್ಲಿ ತುಂಡಾಗಿ ಬಿದ್ದಿದ್ದ ಎರಡು ಬೆರಳುಗಳನ್ನು ನಾಗೂರು ನಿವಾಸಿ ನತರ್ ಇವರು ಗಂಗೊಳ್ಳಿ ಆಂಬ್ಯುಲೆನ್ಸ್ ನ ಇಬ್ರಾಹಿಂ ಗಂಗೊಳ್ಳಿ ಹಾಗೂ ಕೃಷ್ಣ ಎಂಬುವರ ಸಹಕಾರದಲ್ಲಿ ಕುಂದಾಪುರ ಆಸ್ಪತ್ರೆವರೆಗೆ ಶೀತಲೀಕೃತ ವ್ಯವಸ್ಥೆ ಮೂಲಕ ಕೊಂಡೊಯ್ದು, ಕುಂದಾಪುರ ಸಂಚಾರ ಠಾಣೆಯ ಎಸ್ ಐ ಸುಧಾ ಪ್ರಭು ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕಳುಹಿಸಲಾಯಿತು. ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/05/2022 07:34 am