ಕಾರ್ಕಳ: ಸ್ಕೂಟರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟ ಘಟನೆ ಮಂಗಳವಾರ ನೀಚಾಲಿನ ಸಾಂತೂರು ಎಂಬಲ್ಲಿ ನಡೆದಿದೆ.
ನಿನ್ನೆ ಮಂಗಳವಾರ ಸ್ಕೂಟರ್‌ನಲ್ಲಿ ಶ್ರೀಕಾಂತ ಹಾಗೂ ಸಹಸವಾರ ರವೀಂದ್ರ ಪೂಜಾರಿ ಅವರು ಬೆಳ್ಮಣ್‌ನಿಂದ ಸಾಂತೂರಿಗೆ ಹೋಗಲು ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ಸಂದರ್ಭ ರಾತ್ರಿ 7.45ರ ಸುಮಾರಿಗೆ ನೀಚಾಲುವಿನ ಸಾಂತೂರು ಕಡೆಗೆ ಹೋಗಲು ದೂರದಿಂದಲೇ ಬಲ ಬದಿಯ ಇಂಡಿಕೇಟರ್ ಹಾಕಿ ರಸ್ತೆಯ ಬಲ ಬದಿಯ ಅಂಚನ್ನು ತಲುಪುವಾಗ ಪಡುಬಿದ್ರೆ ಕಡೆಯಿಂದ ಬೈಕ್ ಸವಾರ ಅತಿ ವೇಗದಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ನ ಎಡಬದಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಸ್ಕೂಟರ್ ಸಮೇತ ಶ್ರೀಕಾಂತ ಹಾಗೂ ರವೀಂದ್ರ ಪೂಜಾರಿ ಅವರು ರಸ್ತೆಗೆ ಬಿದ್ದಿದ್ದು, ಶ್ರೀಕಾಂತ ಅವರಿಗೆ ತಲೆಗೆ ಹಾಗೂ ರವಿಂದ್ರ ಪೂಜಾರಿ ಅವರ ಎಡ ಕಾಲು ಮೂಳೆ ಮುರಿದಿದೆ. ಅಲ್ಲದೇ, ಬೈಕ್ ಸವಾರನಿಗೂ ಕೂಡಾ ಗಾಯವಾಗಿದೆ. ಕೂಡಲೇ ಗಾಯಾಳುಗಳನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಶ್ರೀಕಾಂತ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
20/01/2021 06:51 pm