ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಂತ ಕಾರಿಗೆ ಗುದ್ದಿದ ಆಟೋರಿಕ್ಷಾ : ಚಾಲಕ ಸಾವು

ಉಡುಪಿ : ಅವಸರವೇ ಅಪಘಾತಕ್ಕೆ ಕಾರಣ ಕೆಲವೊಮ್ಮೆ ಚಾಲಕರ ನಿಯಂತ್ರಣಗಳು ತಪ್ಪಿ ಭಾರೀ ಅನಾಹುತಗಳು ಸಂಭವಿಸುತ್ತವೆ.

ನಿಂತ ಕಾರಿಗೆ ಆಟೋರಿಕ್ಷಾ ಡಿಕ್ಕಿ ಹೊಡೆದು ಚಾಲಕ ಪ್ರಾಣ ಕಳೆದುಕೊಂಡ ಘಟನೆ ನಾಗನಬೆಟ್ಟು ಗುಂಡಿಬೈಲು ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ಮುನಬೆಟ್ಟು ಮೂಲದ ಸುನಿಲ್ (44) ಎಂದು ಗುರುತಿಸಲಾಗಿದೆ.

ಆಟೋರಿಕ್ಷಾ ಚಾಲನೆ ಮಾಡುವಾಗ ನಿಯಂತ್ರಣ ಕಳೆದುಕೊಂಡ ಸುನಿಲ್ ಅವರು ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Edited By : Nirmala Aralikatti
Kshetra Samachara

Kshetra Samachara

21/10/2020 12:49 pm

Cinque Terre

9.73 K

Cinque Terre

1

ಸಂಬಂಧಿತ ಸುದ್ದಿ