ಭಾರತ ಜೋಡೋ ಯಾತ್ರೆಯನ್ನು ನಾನು ಖಂಡಿಸುವುದಿಲ್ಲ. ಆಡಳಿತ ಪಕ್ಷವನ್ನು ಬಾಯಿಗೆ ಬಂದ ಹಾಗೆ ಬೈಯುವುದೇ ಯಾತ್ರೆಯ ಉದ್ದೇಶ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜು ಕಿಡಿ ಕಾರಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ಎಂದರೆ ಮುಂದಿನ ಪೀಳಿಗೆಗೆ ಅಥವಾ ಮುಂದಿನ ಅವಧಿಗೆ ಏನಾದರೂ ಹೊಸದಾಗಿ ಕೊಡುವುದಾದರೆ ತಿಳಿಸಬೇಕು. ಅದು ಬಿಟ್ಟು ಆಡಳಿತ ಪಕ್ಷವನ್ನು ಬಯ್ದುಕೊಂಡು ಹೋಗುವುದಷ್ಟೇ, ಭಾರತ ಜೋಡೋ ಯಾತ್ರೆಯ ಉದ್ದೇಶ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಭಾರತ ಜೋಡೋ ಯಾತ್ರೆ ಸಂಪೂರ್ಣ ಫ್ಲಾಪ್ ಆಗಿದೆ. ಭಾರತ ಜೋಡೋ ಯಾತ್ರೆ ಮೂಲ ಉದ್ದೇಶದಂತೆ ಯಾತ್ರೆ ನಡೆಯುತ್ತಿಲ್ಲ. ಇನ್ನು, ಅವರ ನಿರೀಕ್ಷೆಯಂತೆ ಜನರು ಸಹ ಯಾತ್ರೆಯಲ್ಲಿ ಭಾಗವಹಿಸುತ್ತಿಲ್ಲ. ಯಾತ್ರೆಯಲ್ಲಿ ಭಾಗವಹಿಸುವವರಿಗೆ ಮಸಾಲೆ ದೋಸೆ, ಕಡ್ಲೆಪುರಿ, ಹಣ್ಣು ತಿನ್ನುವ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಲೇವಡಿ ಮಾಡಿದರು.
ಭಾರತ ಜೋಡೋ ಯಾತ್ರೆಯಿಂದ ಬಿಜೆಪಿ ಪಕ್ಷಕ್ಕೆ ನಯಾಪೈಸೆಯಷ್ಟು ನಷ್ಟವಿಲ್ಲ. ಬದಲಾಗಿ ಯಾತ್ರೆಯಿಂದ ಬಿಜೆಪಿಗೆ 20 ಪರ್ಸೆಂಟ್ ನಷ್ಟು ಹೆಚ್ಚು ಅನುಕೂಲವಾಗಲಿದೆ ಎಂದರು. ಮುಂಬರುವ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ. ಆದರೆ, ರಾಜಕೀಯದಲ್ಲಿ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.
PublicNext
08/10/2022 02:47 pm