ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಾ: ಶಾಲಾ ಶಿಕ್ಷಕಿಯಾಗಿದ್ದ ದ್ರೌಪದಿ ಮುರ್ಮು ಇಂದು ದೇಶದ ರಾಷ್ಟ್ರಪತಿ: ವಿಧಾನಪರಿಷತ್ ಸದಸ್ಯ ಚಿದಾನಂದಗೌಡ

ಮಧುಗಿರಿ: ಶೈಕ್ಷಣಿಕ ಜಿಲ್ಲಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ವತಿಯಿಂದ ಶನಿವಾರ ಶಿರಾ ನಗರ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ ಶೈಕ್ಷಣಿಕ ಸಮಾವೇಶ ಕಾರ್ಯ ಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ ಗೌಡ ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಯವರು ಜವಾ ಬ್ದಾರಿಯುತವಾಗಿ ತಮ್ಮ ಕರ್ತವ್ಯ ನಿರ್ವಹಿಸಿ, ಪೋಷಕರ ಹಾಗೂ ವಿದ್ಯಾರ್ಥಿಗಳಿಗೆ ನಡುವೆ ಉತ್ತಮ ಬಾಂಧವ್ಯ ದಿಂದ ಅಭಿವೃದ್ಧಿ ಕಡೆ ಕೊಂಡ ಯ್ಯಬೇಕಾಗಿದೆ ತಿಳಿಸಿದರು.

ಅದರಂತೆ ಶಿಕ್ಷಕರಿಗೂ ಸಹ ಗೌರವಯುತ ಸಂಬಳ ನೀಡಿ ಆದರ್ಶ ಮರೆಯಬೇಕೆಂದು ಆಡಳಿತ ಮಂಡಳಿಯವರಿಗೆ ಕಿವಿಮಾತು ಹೇಳಿದರು. ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕ ರಿಗೆ ಮುಂದಿನ ದಿನಗಳಲ್ಲಿ ಅತ್ಯಂತ ಹೆಚ್ಚಿನ ಸಂಬಳ ನೀಡ ಬೇಕೆಂದು ಸರ್ಕಾರದ ಗಮ ನಕ್ಕೆ ತಂದು ಸಂಬಳ ಹೆಚ್ಚಿಸು ವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಶಾಲಾ ಶಿಕ್ಷಕಿಯಾಗಿದ್ದಂತಹ ದ್ರೌಪದಿ ಮೂರ್ಮ ರವರು ಇಂದು ದೇಶದ ರಾಷ್ಟ್ರಪತಿ ಆಗಿರುವುದಕ್ಕೆ ಅವರ ನಿರಂತರ ಓದು, ಅವರ ಅಪಾರ ಜ್ಞಾನವೇ ಕಾರಣ, ಆದ್ದರಿಂದ ಈಗಾಗಲೇ ವೃತ್ತಿಯಲ್ಲಿರೋ ಶಿಕ್ಷಕರು ಸಹ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಯಾವುದೇ ಕಾರಣಕ್ಕೂ ಓದುವ ಹವ್ಯಾಸವನ್ನು ಮೋಟುಕು ಗೊಳಿಸಬೇಡಿ ಎಂದು ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾದರು.

ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ಗೌಡ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕಕೆ.ಜಿ ರಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ , ನಗರಸಭೆ ಉಪಾಧ್ಯಕ್ಷರಾದ ಅಂಬುಜಾಕ್ಷಿ ನಟರಾಜ್, ರಹಿತ ಶಾಲಾ ಆಡ ಳಿತ ಮಂಡಳಿ ಜಿಲ್ಲಾಧ್ಯಕ್ಷರಾದ ದೊಡ್ಡ ಸಿದ್ದಪ್ಪ, ಶಾಂತಿನಿಕೇತನ ಶಾಲೆಯ ಪಾಂಡುರಂಗಪ್ಪ, ಜ್ಞಾನಜ್ಯೋತಿ ಶಾಲೆಯ ಪರ ಮೇಶ್ ಗೌಡರು, ಮುನಿಸ್ವಾಮಿ, ನರಸಿಂಹಲು ಬಾಬು, ಭಾಸ್ಕರ್ ರೆಡ್ಡಿ, ಮಧು ಎಸ್, ಕೋಟೆ ಚಂದ್ರಶೇಖರ್, ಬಾಲಕೃಷ್ಣ, ಪ್ರಸನ್ನ ಮೂರ್ತಿ, ನವೀನ್ ಕುಮಾರ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

02/10/2022 03:23 pm

Cinque Terre

3.72 K

Cinque Terre

0