ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಪುರಸಭೆಯ ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದ ಸದಸ್ಯರು

ಪಾವಗಡ: ಪುರಸಭೆ ಮುಖ್ಯಾಧಿಕಾರಿಗಳ ನಿರ್ಲಕ್ಷ ಹಾಗೂ ದೌರ್ಜನ್ಯಕ್ಕೆ ಬೇಸತ್ತ ನಾಮಿನಿ ಸದಸ್ಯರು ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ ನಡೆಸಿದ ಘಟನೆ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆಯಿತು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಡಿ.ವೇಲು ರಾಜು ಅದ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಾಮಿನಿ ಸದಸ್ಯರು, ಕಾಂಗ್ರೆಸ್ ಸದಸ್ಯರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ಮದ್ಯೆ ಮಾತಿನ ಚಕಮಕಿ ನಡೆಯಿತು. ಪಟ್ಟಣದ 23 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಲವು ಯೋಜನೆಗಳ ಅನುಧಾನ ಉಪಯೋಗಿಸಿ ಅಭಿವೃದ್ದಿ ಕಾರ್ಯ ಮಾಡುವಲ್ಲಿ ಅಧಿಕಾರಿಗಳು ಗುತ್ತಿಗೆದಾರ ರೊಂದಿಗೆ ಸೇರಿ ಅವ್ಯವಹಾರ ನಡೆಸಿದ್ದಾರೆಂದು ನಾಮಿನಿ ಸದಸ್ಯರು ಆರೋಪಿಸಿದರು.

ನಾಮಿನಿ ಸದಸ್ಯರಿಗೆ ಪುರಸಭೆಯ ಯಾವುದೇ ಮಾಹಿತಿ ನೀಡುವಲ್ಲಿ ನಿರ್ಲಕ್ಷ ತೋರುವ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳ ಕುರಿತು ಮಾತನಾಡಲು ಹೋದರೆ ಅವರಿಗಿಷ್ಟ ಬಂದಂತೆ ಮಾತನಾಡುವುದು ಹಾಗೂ ಮಾಹಿತಿ ನೀಡದೆ ಗೌಫ್ಯತೆ ಕಾಪಾಡುತ್ತಿರುವುದು ವಿಪರ್ಯಾಸ ಎಂದು ಸಭೆಯಲ್ಲಿ ಹರಿಹಾಯ್ದರು.

ರಸ್ತೆ ನಿರ್ಮಾಣ, ಕುಡಿಯುವ ನೀರು, ಚರಂಡಿ, ಡಕ್ ನಿರ್ಮಾಣ, ಬೀದಿ ದೀಪ ನಿರ್ವಹಣೆ, ಕೊಳಚೆ ಪ್ರದೇಶವಾಸಿಗಳಿಗೆ ಡ್ರಮ್ ವಿತರಣೆ ಸೇರಿದಂತೆ ವಿವಿದ ಯೋಜನೆಗಳ ಅನುಷ್ಠಾನದ ವೇಳೆ ಅವ್ಯವಹಾರ ನಡೆದಿದೆ ಎಂದು 5 ಜನ ನಾಮಿನಿ ಸದಸ್ಯರು ಸಭೆಯಲ್ಲೇ ಆರೋಪಿಸಿದರು. ಅಂತಿಮವಾಗಿ ಸದಸ್ಯರು ಹಾಗೂ ಮುಖ್ಯಾಧಿಕಾರಿ ಮದ್ಯೆ ನಡೆಯುತ್ತಿದ್ದ ಮಾತಿನ ಚಕಮಕಿ ನಿಲ್ಲಿಸಲು ಮುಂದಾದ ಅಧ್ಯಕ್ಷ ವೇಲುರಾಜು ಬುಧವಾರ ದಿಂದಲೇ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು ಈ ವಿಚಾರ ಪಾವಗಡದಲ್ಲಿ ವೈರಲ್ ಆಗಿದೆ.

-ರಾಘವೇಂದ್ರ ದಾಸರಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು.

Edited By : Shivu K
PublicNext

PublicNext

27/09/2022 10:35 pm

Cinque Terre

30.46 K

Cinque Terre

0