ತುಮಕೂರು : ಜಿಲ್ಲೆಯಲ್ಲಿ ಪಕ್ಷಾಂತರದ ಕಾವು ರಂಗೇರುತ್ತಿದ್ದು,ಜೆಡಿಎಸ್ ಪಕ್ಷದ ಘಟಾನುಘಟಿ ನಾಯಕರು ಮಾತೃ ಪಕ್ಷ ತೊರೆದು 'ಕೈ' ಹಿಡಿಯುತ್ತಿದ್ದಾರೆ,ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಪತ್ನಿ ಹಾಗು ಮಗ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಬಹಿರಂಗವಾಗಿ ಭಾಗವಹಿಸುವ ಮೂಲಕ ಪಕ್ಷ ತ್ಯಜಿಸುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಗುಬ್ಬಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಪಕ್ಷದ ವರಿಷ್ಟರ ನಿಲುವುಗಳ ಬಗ್ಗೆ ಜೆಡಿಎಸ್ ಪಕ್ಷದ ವರಿಷ್ಟರ ವಿರುದ್ದ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ಪಕ್ಷದ ಬಗ್ಗೆ ಆಕ್ರೋಶ ಹೊರಹಾಕಿದ್ದರು,ಬಳಿಕ ಪಕ್ಷದಿಂದ ದೂರ ಉಳಿದಿದ್ದರು,ಬೇರೆ ಪಕ್ಷ ಸೇರುವ ಬಗ್ಗೆಯೂ ಸಹ ಪರೋಕ್ಷ ಸಂದೇಶ ರವಾನಿಸಿದ್ದರು.
ಕಳೆದೆರಡು ದಿನಗಳಿಂದ ಗುಬ್ಬಿ ಕ್ಷೇತ್ರದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದು ಮಹತ್ವದ ಬೆಳವಣಿಗೆಗೆ ಮುನ್ನುಡಿ ಎಂದು ವಿಶ್ಲೇಶಿಸಲಾಗುತ್ತಿದೆ.ಈ ಮಧ್ಯೆ ಗುಬ್ಬಿ ಕ್ಷೇತ್ರದ ಶಾಸಕರ ಪತ್ನಿ ಭಾರತಿ ಹಾಗೂ ಮಗ ದುಶ್ಯಂತ್ ತುಮಕೂರಿನ ಎಸ್ ಎಸ್ ಐ ಟಿ ಯಲ್ಲಿ ನಡೆದ ಭಾರತ್ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಬಹಿರಂಗವಾಗಿ ಭಾಗವಹಿಸಿ ಕಾಂಗ್ರೆಸ್ ಸೇರುವ ಬಗ್ಗೆ ವರಿಷ್ಟರಿಗೆ ಹಾಗೂ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
Kshetra Samachara
26/09/2022 03:17 pm