ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದಲ್ಲಿ 190 ನೇ ಬೆಳದಿಂಗಳ ಕೂಟ ಮತ್ತು ಜನಜಾಗೃತಿ
ಸಮಾರಂಭ ಸೋಮವಾರ ನಡೆಯಿತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ವಹಿಸಿ ಮಾತನಾಡಿ ಕೇವಲ ದಾರ್ಮಿಕ ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮವನ್ನು ಆಯೋಜಿ ಸುವುದಿಲ್ಲ ಇಲ್ಲಿ ಸಮಾಜದ ಬದಲಾವಣೆಯನ್ನು ಮಾಡುವ ಮತ್ತು ಜನರ ಜಾಗೃತಿಯನ್ನು ಮಾಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸು ತ್ತಿರುವುದಾಗಿ ಹೇಳಿದರು.
ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಯೋಗೀಶ್ ಅಪ್ಪಜಯ್ಯ ಇಂದಿನ ಅವಶ್ಯ ಕತೆ ಮಾರುಕಟ್ಟೆ ಕ್ರಾಂತಿಯೇ ಹೊರತು ಉತ್ಪಾಧನಾ ಕ್ರಾಂತಿ ಅಲ್ಲ ವಿಚಾರದ ಬಗ್ಗೆ ಮಾಹಿತಿ ಯನ್ನು ತಿಳಿಸಿದರು.
ಧಾರ್ಮಿಕ ಕಾರ್ಯ ಕ್ರಮದ ಪ್ರಸಾದ ವ್ಯವಸ್ಥೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ, ಯುವ ಘಟಕ ವಹಿಸಿ ಕೊಂಡಿದ್ದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾ ಯತ ಮಹಾಸಭಾದ ಯುವ ಘಟಕದ ರಾಜ್ಯಾಧ್ಯಕ್ಷ ಮನೋ ಹರ್ ಅಬ್ಬಿಗೆರೆ, ರಾಜ್ಯ ಮಹಿಳಾ ಸಂಘದ ಅಧ್ಯಕ್ಷೆ ಮುಕ್ತಾಂಭ, ಕೊರಟಗೆರೆ ತಾಲೂಕು ಅಧ್ಯಕ್ಷ ಸಿದ್ದಮಲ್ಲಪ್ಪ, ಮಹಿಳಾ ಅಧ್ಯಕ್ಷೆ ಚೆಂದ್ರಕಲಾಲೋಕೇಶ್,
ಪ್ರಧಾನ ಕಾರ್ಯದರ್ಶಿ ಶೈಲಜಾ, ಕಾರ್ಯಕಾರಣಿ ಸದಸ್ಯರುಗಳಾದ ಕೆ.ಸಿ ಶಿವಕುಮಾರ್,ಸವಿತಾ,ನಾಗರಾಜು, ಹರೀಶ್, ವೀರ ಭಧ್ರಯ್ಯ, ಆರ್.ಎಸ್ ರಾಜಣ್ಣ, ಸೇರಿದಂತೆ ಇತರೆ ಮುಖಂಡರುಗಳು ಇದ್ದರು.
Kshetra Samachara
11/10/2022 08:37 pm