ತುಮಕೂರು : ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರೆದಿದ್ದು ಎರಡನೇ ಭಾರಿ ಕೆರೆಗಳು ಕೋಡಿ ಬಿದ್ದಿವೆ. ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ತುಮಕೂರು ತಾಲ್ಲೂಕಿನ ಕೆಸ್ತೂರು ಕೆರೆ 35 ವರ್ಷಗಳ ನಂತರ ಕೋಡಿ ಬಿದ್ದಿದೆ.
ದಾಸಾಲ ಕುಂಟೆ,ಮಣವಿನಕುರಿಕೆ,ಚಿಕ್ಕೊತೊಟ್ಲುಕೆರೆ,ಹಿರೇ ತೊಟ್ಲುಕೆರೆ ಸೇರಿದಂತೆ ತಾಲ್ಲೂಕಿನ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ.
ದಾಸಾಲಕುಂಟೆ ಕೆರೆಯ ಕೋಡಿ ನೀರಿನಲ್ಲಿ ಸಿಲುಕಿ ಕಾರೊಂದು ಕೊಚ್ಚಿಹೋಗಿ ತಡೆ ಗೋಡೆಗೆ ಸಿಲುಕಿದ್ದು ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
PublicNext
13/10/2022 12:00 pm